ಸೋಮವಾರಪೇಟೆ, ಮೇ ೮: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಾಲೂಕಿನ ಶಾಂತಳ್ಳಿ ಹಾಗೂ ಬಜೆಗುಂಡಿ ಗ್ರಾಮದ ವಿಶೇಷ ಚೇತನರು ಹಾಗೂ ವಯಸ್ಕರಿಗೆ ಮಾಸಾಶನ ವಿತರಿಸಲಾಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸೂಚನೆಯಂತೆ ಶಾಂತಳ್ಳಿ ಗ್ರಾಮದ ಗಂಗಮ್ಮ, ಪೊನ್ನಮ್ಮ, ಡೀಡಮ್ಮ, ಮಂಜುನಾಥ್, ಬಜೆಗುಂಡಿಯ ಆನಂದ್ ಅವರಿಗೆ ಯೋಜನೆಯ ಮೇಲ್ವಿಚಾರಕ ಸಂತೋಷ್, ಸೇವಾ ಪ್ರತಿನಿಧಿ ನವ್ಯ ಅವರುಗಳು ಮಾಶಾಸನ ವಿತರಿಸಿದರು.