ಸೋಮವಾರಪೇಟೆ, ಮೇ ೮: ತಾಲೂಕಿನ ಕೋವಿಡ್-೧೯ ಸೋಂಕಿತರ ಸೌಲಭ್ಯಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಎರಡು ವಾಹನಗಳನ್ನು ನೀಡಲಾಗಿದ್ದು, ವಾಹನಗಳ ಚಾಲಕರಿಗೆ ಪಿಪಿಇ ಕಿಟ್ನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ರವೀಂದ್ರ ವಿತರಿಸಿದರು.
ತಾಲೂಕಿನ ಕೋವಿಡ್ ಸೋಂಕಿತರು ಈ ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಂತಿ ಹೇಳಿದರು. ದೂ. ೯೪೪೯೩೮೭೧೭೭, ೯೮೪೪೯೭೧೪೩೯, ೯೪೮೨೫೮೭೦೨೭, ೭೮೯೯೨೫೭೧೧೮ ಸಂಪರ್ಕಿಸಿ ವಾಹನದ ಉಚಿತ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದರು. ವೈದ್ಯರಾದ ಸತೀಶ್ ಕುಮಾರ್, ಮೇಲ್ವಿಚಾರಕರಾದ ಜಯಶ್ರೀ, ಎಂ.ಎಸ್. ಪದ್ಮಾ ಉಪಸ್ಥಿತರಿದ್ದರು.