ಮಡಿಕೇರಿ: ಮಡಿಕೇರಿ ನಗರದ ಕುಂಬಳಗೇರಿ ಉಕ್ಕುಡದ ಗ್ರಾಮಾಭಿವೃದ್ಧಿ ಸಮಿತಿ ವತಿಯಿಂದ ಕೋವಿಡ್ ಸೋಂಕಿತರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ಮನೆಗಳಿಗೆ ತೆರಳಿದ ಸಮಿತಿಯ ಪ್ರಮುಖರು ಕೋವಿಡ್ ನಿಯಮ ಪಾಲನೆಯೊಂದಿಗೆ ಕಿಟ್ಗಳನ್ನು ನೀಡಿದರು. ಸಮಿತಿಯ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಎಸ್.ಎಂ. ದೇವರಾಜ್ ಮತ್ತಿತರ ಪ್ರಮುಖರು ಹಾಜರಿದ್ದರು.ಸುಂಟಿಕೊಪ್ಪ: ಕೊರೊನಾ ಸೋಂಕಿನಿAದ ಹೋಂ ಕ್ವಾರಂಟೈನ್ಲ್ಲಿರುವ ಬಡ ಕುಟುಂಬಗಳ ಮನೆಗೆ ಮಾಜಿ ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಹಾಗೂ ಪಿ.ಎಫ್. ಸಬಾಸ್ಟಿನ್ ಆಹಾರದ ಕಿಟ್ ವಿತರಿಸಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೧೫ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಕೊರೊನಾ ಸೋಂಕು ಪತ್ತೆಯಾಗಿ ಹೋಂ ಕ್ವಾರಂಟೈನಲ್ಲಿದ್ದು, ಸೀಲ್ಡೌನ್ಗೊಂಡಿರುವ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹಾಗೂ ಧೈರ್ಯ ಹೇಳಿ ಆಹಾರದ ಕಿಟ್ಗಳನ್ನು ನೀಡಿದರು.ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತ್ತೇಕ್ರೆ ಒಂದನೇ ಭಾಗದ ಗ್ರಾಮಸ್ಥರಿಗೆ ಗ್ರಾಮ ಪಂಚಾಯಿತಿ ಸದಸ್ಯ ಶಿವದಾಸ್ ಅವರು ಅಗತ್ಯ ವಸ್ತುಗಳ ಕಿಟ್ಗಳನ್ನು ವಿತರಿಸಿದರು.