ಸಿದ್ದಾಪುರ, ಮೇ ೬: ಲಾಕ್ಡೌನ್ ಹಿನ್ನೆಲೆಯಲ್ಲಿ ಸಿದ್ದಾಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಅಂಗಡಿ-ಮುAಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಲಾಕ್ಡೌನ್ ಜಾರಿಯಲ್ಲಿದ್ದರೂ ಕೂಡ ಕೆಲವು ವಾಹನ ಚಾಲಕರು ಹಾಗೂ ಬೈಕ್ ಸವಾರರು ಅನಗತ್ಯವಾಗಿ ವಾಹನಗಳನ್ನು ಪಟ್ಟಣಕ್ಕೆ ತರುತ್ತಿದ್ದರು. ಇಂತಹ ವಾಹನಗಳನ್ನು ತಡೆಹಿಡಿದ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮೋಹನ್ರಾಜ್ ಹಾಗೂ ಸಿಬ್ಬಂದಿ ವಾಹನಗಳನ್ನು ಠಾಣೆಗೆ ತಂದು ನಿಲ್ಲಿಸಿದರಲ್ಲದೆ ದಂಡ ವಿಧಿಸಿದರು.