ಪೊನ್ನಂಪೇಟೆ, ಮೇ ೫: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪ್ರಕರಣವೊಂದು ಪತ್ತೆಯಾಗಿದ್ದು, ನಾಗರಿಕರು ಪ್ರಕರಣವನ್ನು ಭೇದಿಸಿದ್ದಾರೆ. ಕಿರುಗೂರಿನಿಂದ ಬೆಳಗ್ಗಿನ ಜಾವ ೨.೩೦ರ ಸಮಯದಲ್ಲಿ ಪಿಕಪ್ ವಾಹನ (ಕೆ.ಎ. ೧೮ ಬಿ. ೩೧೮೪)ದಲ್ಲಿ ಅಕ್ರಮವಾಗಿ ೩ ಜಾನುವಾರುಗಳನ್ನು ಸಾಗಿಸುತಿದ್ದ ಬಗ್ಗೆ ಮಾಹಿತಿ ತಿಳಿದ ಪೊನ್ನಂಪೇಟೆ ಮಹಾ ಶಕ್ತಿ ಕೇಂದ್ರದ ಪ್ರಮುಖ್ ಆಲೆಮಾಡ ಸುಧೀರ್, ಶಕ್ತಿ ಕೇಂದ್ರದ ಪ್ರಮುಖ್ ಕೋಟೆರ ಕಿಶನ್, ವೀರಾಜಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆ ಉಪಾಧ್ಯಕ್ಷ ಚೆರಿಯಪ್ಪಂಡ ಜೋಯಪ್ಪ, ಕಿರುಗೂರು ಬಿಜೆಪಿ ಅಧ್ಯಕ್ಷ ಚೆರಿಯಪ್ಪಂಡ ಕೀರ್ತನ್ ಹಾಗೂ ಕಿರುಗೂರು ಯೂತ್ ಜನರಲ್ ಸೆಕ್ರೆಟರಿ ಪಿ.ಎಂ. ಅಶ್ವತ್ ಇವರುಗಳ ತಂಡ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿದ್ದಾರೆ.

ಈ ಸಂದರ್ಭ ಆರೋಪಿ ಚಾಲಕ ವಾಹನವನ್ನು ಅಲ್ಲೇ ಬಿಟ್ಟು ಕತ್ತಲಲ್ಲಿ ಪರಾರಿಯಾಗಿದ್ದಾನೆ. ನಂತರ ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು ಜಾನುವಾರುಗಳ ಸಮೇತ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಡಿವೈಎಸ್‌ಪಿ ಜಯಕುಮಾರ್, ಗೋಣಿಕೊಪ್ಪ ವೃತ್ತ ನೀರಿಕ್ಷಕ ಜಯರಾಮ್ ಅವರ ಮಾರ್ಗದರ್ಶನ ದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ಡಿ. ಕುಮಾರ್, ಸಿಬ್ಬಂದಿಗಳಾದ ಸುಬ್ರಮಣಿ, ಹರೀಶ್, ಮಹದೇವಸ್ವಾಮಿ, ಪ್ರಸನ್ನ, ಲೋಕೇಶ್ ಹಾಗೂ ಸಾದಲಿ ಭಾಗವಹಿಸಿದ್ದರು. ರಕ್ಷಣೆ ಮಾಡಿದ ಜಾನುವಾರು ಗಳನ್ನು ಮೈಸೂರಿನ ಜಾನುವಾರು ಪುನರ್ವಸತಿ ಕೇಂದ್ರ ಪಿಂಜರಾ ಪೋಲ್‌ಗೆ ಕಳುಹಿಸಿಕೊಡ ಲಾಗುವುದು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

ಕಠಿಣ ಕ್ರಮಕ್ಕೆ ಆಗ್ರಹ

ನಮ್ಮ ಸ್ವಯಂ ಸೇವಕರ ತಂಡದ ಕಾರ್ಯ ಸುಳಿವರಿತು ಪಿಕ್‌ಅಪ್ ವಾಹನಕ್ಕೆ ಎಸ್ಕಾರ್ಟ್ ಮಾಡಿಕೊಂಡು ಬಂದಿದ್ದ ಅಲ್ಟೋ ಕಾರ್‌ನಲ್ಲಿದ್ದ ದುಷ್ಕರ್ಮಿಗಳು ವೇಗವಾಗಿ ವಾಹನ ಚಲಾಯಿಸಿ ತಪ್ಪಿಸಿಕೊಂಡಿದ್ದಾರೆ. ಪಿಕ್‌ಅಪ್ ವಾಹನ ಮತ್ತು ಗೋವು ಗಳನ್ನು ಪೊನ್ನಂಪೇಟೆ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಹಿಂ.ಜಾ.ವೇ. ಅಧ್ಯಕ್ಷ ಮೇವಡ ಅಯ್ಯಣ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಪೊನ್ನಂಪೇಟೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಗೋಮಾಂಸಕ್ಕಾಗಿ ನಡೆಯುತ್ತಿರುವ ಗೋಹತ್ಯೆ-ಗೋವುಗಳ ಕಳ್ಳಸಾಗಾಣಿಕೆ ತಡೆಗಟ್ಟಲು ಎಸ್‌ಪಿಯವರು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ನಡೆದಿರುವ ಹಲವಾರು ಗೋಹತ್ಯೆ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸ ಬೇಕಾಗಿದೆ. ಪ್ರಕರಣಗಳನ್ನು ಭೇದಿಸಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸದೇ ಇರುವುದರಿಂದ ದುಷ್ಕರ್ಮಿಗಳು ಮತ್ತಷ್ಟೂ ದುಷ್ಕೃತ್ಯ ನಡೆಸಲು ಪ್ರೇರಣೆ ನೀಡಿದಂತಾಗಿದೆ. ಆದ್ದರಿಂದ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿರುವ ಒಟ್ಟು ಪ್ರಕರಣಗಳನ್ನು ರಾಜ್ಯ ಸರಕಾರ, ರಾಜ್ಯಪಾಲರು ಹಾಗೂ ರಾಷ್ಟçಪತಿ ಗಳಿಗೆ ಮನವರಿಕೆ ಮಾಡಿಕೊಟ್ಟು ಸೂಕ್ತ ಕ್ರಮಕ್ಕಾಗಿ ಹಿಂದೂ ಜಾಗರಣಾ ವೇದಿಕೆ ಆಗ್ರಹಿಸಲಿದೆಯೆಂದು ಮೇವಡ ಅಯ್ಯಣ್ಣ ಹಾಗೂ ಕುಕ್ಕೇರ ಅಜಿತ್ ತಿಳಿಸಿದ್ದಾರೆ.