ಮಡಿಕೇರಿ, ಮೇ ೬: ನಗರಸಭೆ ಚುನಾವಣೆಯಲ್ಲಿ ತಮ್ಮ ವಾರ್ಡ್ನಲ್ಲೇ ಪಕ್ಷಕ್ಕೆ ಜಯ ತಂದುಕೊಡಲಾಗದ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರು ಅಸಮರ್ಥ ನಾಯಕರಾಗಿದ್ದು, ಇವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸ ಬೇಕೆಂದು ಪಕ್ಷದ ಚೇರಂಬಾಣೆ ಹೋಬಳಿ ಅಧ್ಯಕ್ಷ, ವಿಎಸ್ಎಸ್ಎನ್ ನಿರ್ದೇಶಕ ಹಾಗೂ ಬೇಂಗೂರು ಗ್ರಾ.ಪಂ. ಮಾಜಿ ಸದಸ್ಯ ಕೇಕಡ ಎಂ. ಸುಗುಣ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲಾಧ್ಯಕ್ಷರು ಮಡಿಕೇರಿ ನಗರದಲ್ಲೇ ವಾಸವಿದ್ದರು ನಗರಸಭೆ ಚುನಾವಣೆಯಲ್ಲಿ ಕನಿಷ್ಟ ಮತಗಳನ್ನು ಗಳಿಸುವಲ್ಲಿ ಪಕ್ಷ ಸೋತಿದೆ. ಇದಕ್ಕೆ ಇವರ ವೈಫಲ್ಯವೇ ಕಾರಣವಾಗಿದ್ದು, ಪಕ್ಷದ ಉಳಿವಿಗಾಗಿ ವರಿಷ್ಠರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗಣೇಶ್ ಅವರನ್ನು ತಕ್ಷಣ ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಸುಗುಣ ಒತ್ತಾಯಿಸಿದ್ದಾರೆ. ಸಮರ್ಥ ನಾಯಕರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಮನವಿ ಮಾಡಿದ್ದಾರೆ.
ಸಂಪಾಜೆ ಜೆಡಿಎಸ್ ಸ್ಥಾನೀಯ ಸಮಿತಿ ಅಧ್ಯಕ್ಷ ರಜಿತ್ ಪಾಲ್ತಾಡು, ಕುಮಾರಸ್ವಾಮಿ ಅವರು ಗಣೇಶ್ ಅವರನ್ನು ತಕ್ಷಣ ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಸುಗುಣ ಒತ್ತಾಯಿಸಿದ್ದಾರೆ. ಸಮರ್ಥ ನಾಯಕರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಮನವಿ ಮಾಡಿದ್ದಾರೆ.
ಸಂಪಾಜೆ ಜೆಡಿಎಸ್ ಸ್ಥಾನೀಯ ಸಮಿತಿ ಅಧ್ಯಕ್ಷ ರಜಿತ್ ಪಾಲ್ತಾಡು, ಜಿಲ್ಲಾಧ್ಯಕ್ಷರ ವೈಫಲ್ಯದಿಂದ ನಗರಸಭೆ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಿದೆ. ನೈಜ ಕಾರ್ಯ ಕರ್ತರನ್ನು ಕಡೆಗಣಿಸಿ ಕಾಂಗ್ರೆಸ್ನಿAದ ಹೊರ ಹಾಕಲ್ಪಟ್ಟವರಿಗೆ ಹಾಗೂ ಪಕ್ಷೇತರರಿಗೆ ಟಿಕೆಟ್ ನೀಡಿದ ಪರಿಣಾಮ ಪಕ್ಷ ಹೀನಾಯ ಸೋಲು ಅನುಭವಿಸಿದೆ ಎಂದು ಆರೋಪಿಸಿದ್ದಾರೆ.