ಕುಶಾಲನಗರ, ಮೇ ೫: ಕುಶಾಲನಗರ ಪಟ್ಟಣ ಪಂಚಾಯತಿಯ ೧೬ ವಾರ್ಡ್ ಗಳಲ್ಲಿ ವಾರ್ಡ್ಮಟ್ಟದ ಕಾರ್ಯಪಡೆ ಕಾರ್ಯಾಚರಣೆ ನಡೆಯಿತು. ಹೊರಜಿಲ್ಲೆ ರಾಜ್ಯಗಳಿಂದ ಆಗಮಿಸಿದ ೩೦ ಕ್ಕೂ ಅಧಿಕ ಮಂದಿಯನ್ನು ಪತ್ತೆಹಚ್ಚಿ ಅವರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಯಿತು ಎಂದು ಕುಶಾಲನಗರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ. ಈ ಸಂಬAಧ ವಾರ್ಡ್ ಮಟ್ಟದ ಕಾರ್ಯಪಡೆಯ ೨ ನೇ ಸಭೆ ಬುಧವಾರ ಆಯಾ ವಾರ್ಡ್ ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಯಿತು. ಕೋವಿಡ್-೧೯ ನಿಯಂತ್ರಣ ಮಾಡುವ ಸಲುವಾಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು. ಹೊರಪ್ರದೇಶಗಳಿಂದ ಬಂದ ಜನರ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳುವುದು ವಾರ್ಡ್ಗಳಲ್ಲಿ ಸಂಚರಿಸುವ ಜನರಿಗೆ ಕಡ್ಡಾಯವಾಗಿ ಮಾಸ್ಕ್ ಹಾಕಲು ಮತ್ತು ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾಹಿತಿ ಒದಗಿಸುವುದು. ಮಂಗಳವಾರ ಮತ್ತು ಶುಕ್ರವಾರ ಮಾತ್ರ ಬೆಳಿಗ್ಗೆ ೬ ರಿಂದ ೧೨ ರ ತನಕ ಅವಶ್ಯವಿರುವ ಉದ್ದಿಮೆಗಳನ್ನು ತೆರೆಯಲು ಅವಕಾಶವಿರುವುದರಿಂದ ಪೊಲೀಸರ ಸಹಕಾರ ಪಡೆದು ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಕೃಷ್ಣಪ್ರಸಾದ್ ತಿಳಿಸಿದ್ದಾರೆ.