ಗೋಣಿಕೊಪ್ಪಲು, ಮೇ ೫: ಗೋಣಿಕೊಪ್ಪ ಸಮೀಪದ ನಗರದಲ್ಲಿರುವ ಸಂತ್ರಸ್ತೆವೊರ್ವಳನ್ನು ಮದುವೆ ಮಾಡಿಕೊಂಡು ನಂತರ ಆಕೆಗೆ ಮೋಸಮಾಡಿ, ಆಕೆಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಬಲವಂತದಿAದ ಗರ್ಭಧಾರಣೆ ಮಾಡಿಸಿದ ಆರೋಪದ ಮೇರೆ ಗೋಣಿಕೊಪ್ಪ ಪೋಲಿಸರು ಸಂತ್ರಸ್ತೆಯ ದೂರಿನನ್ವಯ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ಪ್ರಮುಖ ಆರೋಪಿ ಮೂಲತಃ ಪಾಲಿಬೆಟ್ಟ ನಿವಾಸಿ ಶ್ರೀನಿವಾಸ ಎಂಬ ಯುವಕನನ್ನು ವಶಕ್ಕೆ ಪಡೆದ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಉಳಿದಂತೆ ಪ್ರಕರಣಕ್ಕೆ ಸಂಬAಧಿಸಿದAತೆ ಶ್ರೀನಿವಾಸನ ತಾಯಿ,ಹಾಗೂ ಶ್ರೀನಿವಾಸನ ಪ್ರೇಯಸಿಯ ಮೇಲೆ ಕೊಲೆ ಬೆದರಿಕೆ ಪ್ರಕರಣ ದಾಖಲಿಸಲಾಗಿದೆ.

ಬಲವಂತವಾಗಿ ಗರ್ಭಧಾರಣೆ ಮಾಡಿಸಿದ ಆರೋಪದ ಮೇರೆ ಹೆಚ್.ಡಿ.ಕೋಟೆಯ ಖಾಸಗಿ

(ಮೊದಲ ಪುಟದಿಂದ) ಆಸ್ಪತ್ರೆಯ ವೈದ್ಯರ ಮೇಲೆಯು ಪ್ರಕರಣ ದಾಖಲಾಗಿದೆ.

ಆರೋಪಿ ಶ್ರೀನಿವಾಸ ಸಂತ್ರಸ್ತೆಯನ್ನು ನಂಬಿಸಿ ಕಳೆದ ಐದು ತಿಂಗಳ ಹಿಂದೆಯೇ ಕೆ.ಆರ್.ನಗರದಲ್ಲಿರುವ ಶಿವನ ದೇವಾಲಯದಲ್ಲಿ ವಿವಾಹವಾಗಿ ಸಂಸಾರ ನಡೆಸಿ, ನಂತರ ಕಳೆದ ಮೂರು ತಿಂಗಳ ಹಿಂದೆ ಸಂತ್ರಸ್ತೆಯನ್ನು ಬಲವಂತವಾಗಿ ಗರ್ಭಧಾರಣೆ ಮಾಡಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ.

ಆರೋಪಿ ತಾಯಿ ಹಾಗೂ ಬೆಂಗಳೂರಿನಲ್ಲಿರುವ ಪ್ರೇಯಸಿ ಮೊಬೈಲ್ ಮೂಲಕ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುವುದಾಗಿ ತನ್ನ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂತ್ರಸ್ತೆಯ ದೂರನ್ನು ಸ್ವೀಕರಿಸಿದ ಗೋಣಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಸುಬ್ಬಯ್ಯ ಆರೋಪಿ ಶ್ರೀನಿವಾಸನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಯನ್ನು ನ್ಯಾಯಾಲಯ ಮಡಿಕೇರಿಯ ಕಾರಾಗೃಹಕ್ಕೆ ಕಳುಹಿಸಿದೆ.