ಕೂಡಿಗೆ, ಮೇ ೫: ಶಾಸಕ ಅಪ್ಪಚ್ಚು ರಂಜನ್ ಪಿಪಿಇ ಕಿಟ್ ಧರಿಸಿ ಕೋವಿಡ್ ಸೋಂಕಿತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಘಟನೆ ಕೂಡಿಗೆಯಲ್ಲಿ ನಡೆದಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಕೋವಿಡ್ ಕೇರ್ ಸೆಂಟರ್‌ಗೆ ಬುಧವಾರ ಭೇಟಿ ನೀಡಿದ ಅವರು ಪಿಪಿಇ ಕಿಟ್ ಧರಿಸಿ ಕೇಂದ್ರದಲ್ಲಿ ದಾಖಲಾಗಿದ್ದ ಸೋಂಕಿತರನ್ನು ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸುವುದರೊಂದಿಗೆ ಧೈರ್ಯ ತುಂಬಿದರು.

ನAತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಲಾಕ್ ಡೌನ್‌ನಿಂದ ಹಲವರಿಗೆ ಅನಾನುಕೂಲ ಉಂಟಾಗಿದೆ. ಜನರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ. ಇದರಿಂದ ಕಷ್ಟವಾದರೂ ಕೂಡ ಸ್ವಲ ದಿನ ಸಹಿಸಿಕೊಂಡಲ್ಲಿ ಜೀವ ಉಳಿಸಿ ಕೊಳ್ಳಬಹುದು. ಯಾರೂ ಕೂಡ ಅಜಾಗರೂಕತೆ ತೋರಬಾರದು. ಸೋಂಕಿತರನ್ನು ಉತ್ತಮ ರೀತಿಯಲ್ಲಿ ಆರೈಕೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ನೋಡಲ್ ಅಧಿಕಾರಿ ಶೇಖರ್, ಕುಶಾಲನಗರ ಕಂದಾಯ ಇಲಾಖೆಯ ನಿರೀಕ್ಷಕ ಸಂತೋಷ, ತಾಲೂಕು ಕಾರ್ಯ ನಿವಾರ್ಹಣಾಧಿಕಾರಿ ಜಯಣ್ಣ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ವೈದ್ಯಾಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜನತೆಗೆ ಮನವಿ

ಕುಶಾಲನಗರ: ಕೊಡಗು ಜಿಲ್ಲೆಯನ್ನು ಸೋಂಕು ಮುಕ್ತ ಜಿಲ್ಲೆಯಾಗಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕಾಗಿದೆ. ಕೆಲವೇ ದಿನಗಳ ಕಾಲ ಯಾರೂ ಮನೆಯಿಂದ ಹೊರ ಬರಬೇಡಿ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಜನತೆಗೆ ಮನವಿ ಮಾಡಿದ್ದಾರೆ

ಕುಶಾಲನಗರ ಭಾಗದಲ್ಲಿರುವ ಜಿಲ್ಲೆಯ ಗಡಿಯ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಶಾಲನಗರದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು. ಗಡಿಭಾಗದಲ್ಲಿ ತೆರಳುವ ವಾಹನಗಳ ಪರಿಶೀಲನೆ ನಡೆಸಿ ಹೊರಜಿಲ್ಲೆ, ರಾಜ್ಯದ ಜನರನ್ನು ಕಡ್ಡಾಯವಾಗಿ ಕ್ವಾರಂಟೈನ್ ಒಳಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ಲಸಿಕೆ

(ಮೊದಲ ಪುಟದಿಂದ) ಅಲಭ್ಯತೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ರಂಜನ್, ಈ ಬಗ್ಗೆ ಈಗಾಗಲೇ ಸಂಬAಧಿಸಿದ ಅಧಿಕಾರಿಗಳ ಜತೆ ಚರ್ಚಿಸಿದ್ದು, ಸದ್ಯದಲ್ಲಿ ೫ ಲಕ್ಷ ಲಸಿಕೆ ಬರುವುದಾಗಿ ಮಾಹಿತಿ ನೀಡಿದರು.

ಕೊರೊನಾ ಸೋಂಕು ತಗುಲಿ ಮೃತಪಟ್ಟ ದೇಹಗಳ ಅಂತ್ಯಕ್ರಿಯೆಗೆ ಸಹಕರಿಸುತ್ತಿರುವ ಕುಶಾಲನಗರದ ಯುವಕರ ತಂಡದ ಕಾರ್ಯವೈಖರಿ ಬಗ್ಗೆ ಶಾಸಕ ರಂಜನ್ ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಕುಶಾಲನಗರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಡಿವೈಎಸ್ಪಿ ಶೈಲೇಂದ್ರ ಕುಮಾರ್, ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಠಾಣಾಧಿಕಾರಿ ಗಣೇಶ್, ಶಿವಶಂಕರ್ ಮತ್ತಿತರು ಇದ್ದರು.