* ವೀರಾಜಪೇಟೆ, ಮೇ ೫: ಕೊರೊನಾ ಎರಡನೇ ಅಲೆ ಬಹಳ ಜೋರಾಗಿದ್ದು. ಲಾಕ್ಡೌನ್ ಇರುವುದರಿಂದ ಹಲವು ನಿರ್ಗತಿಕರಿಗೆ, ಮನೆಯಿಲ್ಲದವರಿಗೆ ಊಟ, ತಿಂಡಿ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಸ್ ತಂಗುದಾಣದಲ್ಲಿ ಮಲಗುತ್ತಿದ್ದರೂ ಕೂಡ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಅದಕ್ಕಾಗಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಮಾನವೀಯತೆ ದೃಷ್ಟಿಯಿಂದ ಲಾಕ್ಡೌನ್ ಮುಗಿಯುವವರೆಗೂ ಅಂತವರಿಗೆ ಊಟ ತಿಂಡಿ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ (ಪ್ರಭಾರ) ಹೇಮ ಕುಮಾರ್ ತಿಳಿಸಿದ್ದಾರೆ. ಸುಮಾರು ಹದಿನೈದು ಜನರನ್ನು ಈಗಾಗಲೇ ಗುರುತಿಸಲಾಗಿದೆ. ಊಟದ ವ್ಯವಸ್ಥೆ ಬೇಕಾದವರು ಪಟ್ಟಣ ಪಂಚಾಯಿತಿ ಗಮನಕ್ಕೆ ತಂದರೆ ಅವರಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.