ರಾಜ್ಯದಾದ್ಯಂತ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರೊAದಿಗೆ ಸಾವಿನ ಸಂಖ್ಯೆಯೂ ಏರುತ್ತಿರುವದರಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸರಕಾರ ಆಗಾಗ್ಗೆ ಮಾರ್ಗಸೂಚಿಗಳನ್ನು ಹೊರಡಿಸುತ್ತಲೇ ಇದೆ. ಮೊನ್ನೆಯವರೆಗೆ ಪ್ರತಿದಿನ ಬೆಳಿಗ್ಗೆ ೬ರಿಂದ ೧೦ಗಂಟೆವರೆಗೆ ಔಷಧಿ, ಹಾಲು, ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಪ್ರತಿದಿನ ಜನಜಂಗುಳಿಯೊAದಿಗೆ ಸಮಯ ಮೀರಿದರೂ ಜನರ ಅನವಶ್ಯಕ ಓಡಾಟ ಮುಂದುವರಿದ ಹಿನ್ನೆಲೆಯಲ್ಲಿ ನಿನ್ನೆಯಿಂದ ಮತ್ತೆ ಪರಿಷ್ಕರಣೆ ಮಾಡಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಹೊಸ ಮಾರ್ಗಸೂಚಿಯಂತೆ ವಾರದಲ್ಲಿ ಮಂಗಳವಾರ ಹಾಗೂ ಶುಕ್ರವಾರ ಬೆಳಿಗ್ಗೆ ೬ರಿಂದ ಮಧ್ಯಾಹ್ನ ೧೨ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ನೀಡಲಾಗಿದೆ. ಇನ್ನುಳಿದ ಐದು ದಿನಗಳ ಕಾಲ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಜಿಲ್ಲಾಡಳಿತದ ವತಿಯಿಂದ ಪೊಲೀಸ್ ಇಲಾಖೆ ಮೂಲಕ ಕಟ್ಟೆಚ್ಚರ ವಹಿಸಲಾಗಿತ್ತು. ಬೆಳಗ್ಗಿನ ಜಾವ ಹಾಲು ಹಾಗೂ ಪತ್ರಿಕೆಗಳ ವಿತರಣೆಗೆ ಅವಕಾಶ ನೀಡಲಾಗಿತ್ತು. ನಂತರದಲ್ಲಿ ಔಷಧಿ ಮಳಿಗೆಗಳ ಹೊರತುಪಡಿಸಿ ಬೇರೆ ಯಾವದಕ್ಕೂ ಅವಕಾಶ ನೀಡಲಿಲ್ಲ. ಜಿಲ್ಲಾ ಕೇಂದ್ರ ಮಡಿಕೇರಿಯ ಜ.ತಿಮ್ಮಯ್ಯ ವೃತ್ತದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿತ್ತು. ಆಸ್ಪತ್ರೆ, ಕಚೇರಿ, ಬ್ಯಾಂಕ್ ಇನ್ನಿತರ ತುರ್ತು ಕೆಲಸ ಕಾರ್ಯಗಳಿಗೆ ಆಗಮಿಸುವವರಿಗೆ ಮಾತ್ರ ತೆರಳಲು ಅವಕಾಶ ನೀಡಲಾಯಿತು. ಅನಗತ್ಯವಾಗಿ ಸುಳ್ಳು ಮಾಹಿತಿ ನೀಡಿ ಅಡ್ಡಾಡಲು ಬಂದವರನ್ನು ಹಾಗೆಯೇ ವಾಪಸ್ ಕಳುಹಿಸಲಾಯಿತು. ಗುರುವಾರ ಕೂಡ ಇದೇ ಪರಿಸ್ಥಿತಿ ಮುಂದುವರಿಯಲಿದೆ.

ವೀರಾಜಪೇಟೆ ಪೂರ್ಣ ಬಂದ್

ವೀರಾಜಪೇಟೆ : ಜಿಲ್ಲಾಡಳಿತ ಕೊರೊನಾ ಕರ್ಫ್ಯೂ ಆದೇಶದ ಹಿನ್ನೆಲೆಯಲ್ಲಿ ಇಂದು ವೀರಾಜಪೇಟೆ ಪಟ್ಟಣದಲ್ಲಿ ವಾಹನ ಜನ ಸಂಚಾರವಿಲ್ಲದೆ ಪಟ್ಟಣದ ಎಲ್ಲ ಮುಖ್ಯ ರಸ್ತೆಗಳು ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿದ್ದವು.

ವೀರಾಜಪೇಟೆ ಸಮುಚ್ಚಯ ಪೊಲೀಸ್ ಠಾಣೆಗಳ ಪೊಲೀಸ್ ವಾಹನಗಳು ವೀರಾಜಪೇಟೆ ಪಟ್ಟಣದಲ್ಲಿ ಸಂಚರಿಸಿ ನಿವಾಸಿಗಳು ಯಾರೂ ಹೊರಗೆ ಬಾರದಂತೆ ಎಚ್ಚರಿಕೆ ನೀಡುತ್ತಿದ್ದುದು ಕಂಡುಬAತು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ್ದರಿಂದ ತಾಲೂಕಿನಿಂದ ಬರುವ ಹೊರ ರೋಗಿಗಳ ಸಂಖ್ಯೆ ವಿರಳವಾಗಿತ್ತು. ವೀರಾಜಪೇಟೆಯ ಮಹಿಳಾ ಸಮಾಜದಲ್ಲಿ ಎರಡನೇ ಲಸಿಕೆ ಹಾಕಿಸಿಕೊಳ್ಳಲು ಜನರು ವಿರಳವಾಗಿದ್ದರು. ಮೊದಲ ಹಂತದ ಲಸಿಕೆ ಹಾಕಲು ಇನ್ನೂ ಅನೇಕ ಜನರಿಗೆ ಬಾಕಿ ಇದ್ದು ಲಸಿಕೆ ಖಾಲಿಯಾದ್ದರಿಂದ ಈಗ ಮೊದಲ ಹಂತದ ಲಸಿಕೆ ಬರುವವರೆಗೆ ಕಾಯಬೇಕಾದ ಪರಿಸ್ಥಿತಿ ಬಂದಿದೆ.

ಕಾಕೋಟುಪರAಬು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊದಲ ಹಂತದ ಲಸಿಕೆ ಖಾಲಿಯಾಗಿದ್ದು, ಎರಡನೇ ಲಸಿಕೆ ಸುಮಾರು ೫೦ ಬಂದಿದ್ದು ಈ ಲಸಿಕೆಯು ಇಂದು ಖಾಲಿಯಾಗಿದೆ. ಲಸಿಕೆ ನಿರೀಕ್ಷೆಯಲ್ಲಿ ಕೇಂದ್ರಕ್ಕೆ ಬಂದಿದ್ದ ಗ್ರಾಮಸ್ತರು ಹಾಗೆಯೇ ಹಿಂದಿರುಗಬೇಕಾಯಿತು.ಸೋಮವಾರಪೇಟೆ, ಮಡಿಕೇರಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಭರ್ತಿಯಾದ ನಂತರ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಂಕಿತರಿಗೆ ದಾಖಲಾಗಲು ಅವಕಾಶ ನೀಡಲಾಗುವುದು ಎಂದು ಆರೋಗ್ಯ ಘಟಕ ತಿಳಿಸಿದೆ.

ಕುಶಾಲನಗರ : ವಾರದ ೨ ದಿನಗಳು ಮಾತ್ರ ನಿಗದಿತ ಅವಧಿಯಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಿ, ಉಳಿದ ದಿನ ಸಂಪೂರ್ಣ ಬಂದ್ ಆದೇಶದ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ ತುರ್ತು ಸೌಲಭ್ಯ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಕುಶಾಲನಗರ ಗಡಿಭಾಗದ ಅರಣ್ಯ ತಪಾಸಣಾ ಗೇಟ್ ಬಳಿ ಪೊಲೀಸರು ಜಿಲ್ಲೆಗೆ ಬರುವ ಎಲ್ಲಾ ವಾಹನಗಳ ತಪಾಸಣೆ ನಡೆಸುವುದರ ಜೊತೆಗೆ ಅನಾವಶ್ಯಕ ಓಡಾಟ ನಡೆಸುತ್ತಿದ್ದ ವಾಹನ ಸವಾರರಿಗೆ ದಂಡ ವಿಧಿಸಿ ಕ್ರಮ ಕೈಗೊಂಡರು. ಕುಶಾಲನಗರ ಗಡಿಭಾಗ ಕೊಪ್ಪದಲ್ಲಿ ಮಾತ್ರ ಬೆಳಿಗ್ಗೆ ೬ ರಿಂದ ೧೨ ರ ತನಕ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಈ ಹಿನ್ನೆಲೆಯಲ್ಲಿ ಜನಸಂಚಾರ ಅಧಿಕ ಪ್ರಮಾಣದಲ್ಲಿದ್ದು, ಕೆಲವು ಅಂಗಡಿಗಳಲ್ಲಿ ದಿನನಿತ್ಯ ವಸ್ತುಗಳ ಖರೀದಿಗೆ ನೂಕು ನುಗ್ಗಲು ಕಂಡುಬAತು.

ಸುAಟಿಕೊಪ್ಪ : ಕೊರೊನಾ ಕರ್ಫ್ಯೂ ಹಿನ್ನೆಲೆ ಸುಂಟಿಕೊಪ್ಪದಲ್ಲಿ ಬುಧವಾರ ಜನರ ಓಡಾಟ ವಿರಳವಾಗಿತ್ತು.

ಸರಕಾರಿ ಕಚೇರಿ ಸಹಕಾರ ಬ್ಯಾಂಕು, ರಾಷ್ಟಿçÃಕೃತ ಬ್ಯಾಂಕ್, ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಹಾಗೂ ಸೆಸ್ಕ್ ಕಚೇರಿಗಳು ಕಾರ್ಯನಿರ್ವಹಿಸಿದವು. ಖಾಸಗಿ ಕ್ಲಿನಿಕ್, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಸಂಖ್ಯೆ ಅಧಿಕವಾಗಿತ್ತು. ಅನಗತ್ಯ ಸಂಚಾರಕ್ಕೆ ಪೊಲೀಸರು ಕಡಿವಾಣ ಹಾಕಿದರು.