ವೀರಾಜಪೇಟೆ, ಮೇ ೫: ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಬಿಟ್ಟಂಗಾಲದಲ್ಲಿ ನಡೆದಿದೆ.

ಬಿಟ್ಟಂಗಾಲ ನಿವಾಸಿ ಪಿ.ಕೆ. ವಿಜು (೪೫) ಬಂಧಿತ ಆರೋಪಿ. ಬಿಟ್ಟಂಗಾಲ ಜಂಕ್ಷನ್‌ನಲ್ಲಿರುವ ಮಳಿಗೆಯೊಂದರ ಸನಿಹದಲ್ಲಿ ವಿಜು ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದ ವೇಳೆ ಧಾಳಿ ನಡೆಸಿದ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಸುಮಾರು ರೂ. ೨೪೫೦ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.

ಮತ್ತೊAದು ಪ್ರಕರಣದಲ್ಲಿ ಕೊವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿ ಕೋಳಿ ಮಾಂಸ ಮಾರಾಟ ಮಾಡುತಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾದ ಘಟನೆ ಬಿಟ್ಟಂಗಾಲ ಅಂಬಲ ರಸ್ತೆಯಲ್ಲಿ ನಡೆದಿದೆ.

ವೀರಾಜಪೇಟೆ ಬಿಟ್ಟಂಗಾಲ ಅಂಬಲ ರಸ್ತೆಯ ನಿವಾಸಿ ಪಿ.ಬಿ. ಬಿಬಿನ್ (೨೮) ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಬಿಟ್ಟಂಗಾಲದ ಅಂಬಲ ರಸ್ತೆಯಲ್ಲಿ ಮಾಂಸದ ಅಂಗಡಿಯನ್ನು ತೆರದು ಕೋಳಿ ಮಾಂಸವನ್ನು ತನ್ನ ಗಿರಾಕಿಗಳಿಗೆ ನೀಡುತಿದ್ದ ಖಚಿತ ಮಾಹಿತಿ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಬಿಬಿನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.