ಮಡಿಕೇರಿ, ಮೇ. ೪: ಜಿಲ್ಲೆಯ ೫ ಕೋವಿಡ್ ಕೇರ್ ಸೆಂಟರ್‌ನಲ್ಲಿ ೬೫೦ ಬೆಡ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಡಿಕೇರಿ ಸಮೀಪದ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ೨೭೦ ಬೆಡ್ ಪೈಕಿ ೧೮ ಬೆಡ್‌ಗೆ ಸೋಂಕಿತರು ದಾಖಲಾಗಿದ್ದಾರೆ. ಬಾಳುಗೋಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ೮೦ ಬೆಡ್ ಪೈಕಿ ೩೫, ಕೂಡಿಗೆ ಮುರಾರ್ಜಿ ಶಾಲೆಯಲ್ಲಿ ೧೦೦ ಬೆಡ್ ಪೈಕಿ ೭೭ ಸೋಂಕಿತರು ದಾಖಲಾಗಿದ್ದಾರೆ. ಬಾಳುಗೋಡು ಏಕಲವ್ಯ, ಕುಶಾಲನಗರ ಸಮೀಪದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಲಾ ೧೦೦ ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ