ಮಡಿಕೇರಿ, ಮೇ ೪: ವೀರಾಜಪೇಟೆ ತಾಲೂಕು ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಸಧ್ಯದಲ್ಲೆ ಪರಿವರ್ತನೆ ಮಾಡಲಾಗುತ್ತದೆ ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಹೊರ ರೋಗಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ ಪಾಸಿಟಿವಿಟಿ ದರ ಹೆಚ್ಚಿದೆ. ಜನತೆ ಕೋವಿಡ್ ನಿಯಮ ಪಾಲಿಸಬೇಕು. ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ವೀರಾಜಪೇಟೆ ತಾಲೂಕು ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವ ಅವಶ್ಯಕತೆ ಇದೆ. ಸೋಮವಾರಪೇಟೆ ಆಸ್ಪತ್ರೆಗೆ ವೀರಾಜಪೇಟೆ ಆಸ್ಪತ್ರೆಯಲ್ಲಿದ್ದ ೧೨ ಆಕ್ಸಿಜನ್ ಸಿಲಿಂಡರ್ ಅನ್ನು ರವಾನಿಸಲಾಗಿದೆ. ವೀರಾಜಪೇಟೆಯಲ್ಲಿ ೧೪ ಆಕ್ಸಿಜನ್ ಸಿಲಿಂಡರ್ ಇವೆೆ. ೫೦ ಆಕ್ಸಿಜನ್ ಸಿಲಿಂಡರ್ಗೆ ರಾಜ್ಯ ಸರಕಾರದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ. ತಾ.೫ ರಂದು ವೀರಾಜಪೇಟೆ ಆಸ್ಪತ್ರೆಗೆ ಸಿಲಿಂಡರ್ ಬರುವ ಸಾಧ್ಯತೆ ಇದೆ ಎಂದರು.
ಜಿಲ್ಲಾಡಳಿತದ ಕೆಲವೊಂದು ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸಿದ್ದು, ನಾನು ಕೂಡ ಮುಖ್ಯಮಂತ್ರಿ, ಆರೋಗ್ಯ ಸಚಿವರು ಸೇರಿದಂತೆ ಸಂಬAಧಪಟ್ಟ ಇಲಾಖೆಗೆ ಪತ್ರ ಬರೆದಿದ್ದೇನೆ. ವೀರಾಜಪೇಟೆ ಹಾಗೂ ಸೋಮವಾರಪೇಟೆಗೆ ಕೋವಿಡ್ ಆಸ್ಪತ್ರೆಯ ಅವಶ್ಯಕತೆ ಇದೆ ಎಂದ ಅವರು, ಹೊರರೋಗಿಗಳಿಗಾಗಿ ವೀರಾಜಪೇಟೆ ಆಸ್ಪತ್ರೆಯ ಹಿಂಭಾಗದ ಆಯುಷ್ ಆಸ್ಪತ್ರೆ, ಕಾಕೋಟುಪರಂಬು ಆರೋಗ್ಯ ಕೇಂದ್ರದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಆ್ಯಂಬ್ಯುಲೆನ್ಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರವನ್ನು ವಿಶೇಷವಾಗಿ ಹೆರಿಗೆಗೆಂದು ಮೀಸಲಿರಿಸಲಾಗುತ್ತದೆ. ಈ ನಡುವೆ ಕೋವಿಡ್ ಆಸ್ಪತ್ರೆ ತೆರೆಯುವ ಸಂಬAಧ ಗೊಂದಲದ ರಾಜಕೀಯ ಹೇಳಿಕೆ ನೀಡುವುದು ಬೇಡ. ಜೀವದ ಜೊತೆ ರಾಜಕೀಯ ಬೇಡ. ಸಲಹೆ ನೀಡಿ ಅದನ್ನು ಸರಕಾರ ಸ್ವೀಕರಿಸುತ್ತೆ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಆಕ್ಸಿಜನ್ ಕೊರತೆ ಇಲ್ಲ. ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿಯೊಂದಿಗೆ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯೊಂದಿಗೆ ಸಂಪರ್ಕದಲ್ಲಿದ್ದೇನೆ. ಸಮಸ್ಯೆ ಆಗದಂತೆ ಎಚ್ಚರವಹಿಸಲಾಗಿದೆ. ಕೊಡಗನ್ನು ತÀಹಬದಿಗೆ ತರುವ ಕೆಲಸವಾಗಬೇಕು. ಕೋವಿಡ್ ಪಾಸಿಟಿವ್ ಬಂದವರು ತಿರುಗಾಡುವುದು ತಿಳಿದು ಬಂದಿದೆ. ಅಂತವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಸೋಂಕಿತರಿಗೆ ಸೀಲ್ ಹಾಕುವ ಕ್ರಮಕೈಗೊಳ್ಳುತ್ತೇವೆ. ಸೋಂಕಿತರು ಹೊರಬಂದರೆ ಎಫ್ಐಆರ್ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.