ಶನಿವಾರಸಂತೆ, ಮೇ ೪: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈಗಾಗಲೇ ೬ ಮಂದಿ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರೆಲ್ಲಾ ಚಿಕಿತ್ಸೆ ಪಡೆದು ಇದೀಗ ಹೋಂ ಕ್ವಾರಂಟೈನ್ನಲ್ಲಿದ್ದಾರೆ.
ಆ ಸಿಬ್ಬಂದಿಗಳೊAದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಗಳನ್ನು ಸಮುದಾಯ ಆರೋಗ್ಯ ಕೇಂದ್ರದ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ರಶೀದ್ ಅಹಮ್ಮದ್ ಮಂಗಳವಾರ ಕೋವಿಡ್ ಪರೀಕ್ಷೆಗೆ ಒಳಪಡಿಸಿ ವರದಿ ಕಳುಹಿಸಿದರು.
ಅಧಿಕಾರಿ ರಶೀದ್ ರಂಜಾನ್ ವ್ರತಾಚರಣೆ ಪ್ರಯುಕ್ತ ಉಪವಾಸದಲ್ಲಿದ್ದರೂ ಠಾಣೆಗೆ ಬಂದು ಪೊಲೀಸರಿಗೆ ಕೋವಿಡ್ ಪರೀಕ್ಷೆ ಮಾಡಿ, ನಂತರ ಪುನಃ ಆರೋಗ್ಯ ಕೇಂದ್ರಕ್ಕೆ ತೆರಳಿ ಕರ್ತವ್ಯಕ್ಕೆ ಹಾಜರಾದ ಬಗ್ಗೆ ಪಿಎಸ್ಐ ದೇವರಾಜ್ ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.