ಸುಂಟಿಕೊಪ್ಪ, ಮೇ ೪: ರಾಜ್ಯದಲ್ಲಿ ಆಮ್ಲಜನಕ ಕೊರತೆ ಗಮನಿಸಿದ ಸುಂಟಿಕೊಪ್ಪ ವರ್ಕ್ಶಾಪ್ ಮಾಲೀಕರ ಸಂಘದವರು ೧೦ ಆಮ್ಲಜನಕ ಸಿಲಿಂಡರ್ ಅನ್ನು ಉಚಿತವಾಗಿ ನೀಡುವ ಮೂಲಕ ಮಾನವೀಯತೆ ಮೆರೆದರು. ವರ್ಕ್ಶ್‌ಪ್ ಮಾಲೀಕರ ಸಂಘದವರು ನೀಡಿದ್ದ ೧೦ ಆಮ್ಲಜನಕ ಸಿಲಿಂಡರ್‌ಗಳನ್ನು ಕುಶಾಲನಗರ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ಪಡೆದುಕೊಂಡಿದ್ದು, ಆಮ್ಲಜನಕ ಟ್ಯಾಂಕರ್ ಮೂಲಕ ತುಂಬಿಸಿ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗುವುದು.ಈ ಸಂದರ್ಭ ವರ್ಕ್ಶಾಪ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಸೇರಿದಂತೆ ಪದಾಧಿಕಾರಿಗಳು ಇದ್ದರು.