ವೀರಾಜಪೇಟೆ, ಮೇ ೪: ವೀರಾಜಪೇಟೆ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಅಧಿಕವಾಗುತ್ತಿರುವುದರಿಂದ ಕೊರೊನಾ ನಿಯಂತ್ರಣಕ್ಕೆ ಕಠಿಣ ಕ್ರಮ ವಹಿಸುವಂತೆ ತಾಲೂಕು ಕೊರೊನಾ ಜಾಗೃತಿ ಸಮಿತಿ ತೀರ್ಮಾನಿಸಿದೆ..

ವೀರಾಜಪೇಟೆ ತಾಲೂಕಿನ ಎಲ್ಲ ಬಿಪಿಎಲ್ ಕಾರ್ಡ್ದಾರರಿಗೆ ಮೇ ತಿಂಗಳಿAದಲೇ ಪಡಿತರ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವಂತೆಯೂ ಇದರ ಉಸ್ತುವಾರಿಯನ್ನು ತಾಲೂಕು ಕಚೇರಿಯ ಆಹಾರ ಸರಬರಾಜು ಇಲಾಖೆಗೆ ವಹಿಸಲು ನಿರ್ಧರಿಸಿತು.

ತಾಲೂಕಿನಲ್ಲಿ ಸುಮಾರು ೧೬೦೦೦ ಮಂದಿ ಬಿಪಿಎಲ್. ಕಾರ್ಡ್ದಾರರಿದ್ದು, ಕೊರೊನಾ ಪೂರ್ಣವಾಗಿ ಪರಿಹಾರ ಕಾಣುವವರೆಗೆ ಮನೆ ಬಾಗಿಲಿಗೆ ಪಡಿತರ ವಿತರಣೆ ಮುಂದುವರೆಯಲಿದೆ. ಇನ್ನು ಮುಂದೆ ಸರಕಾರದ ಪಡಿತರ ಸಾಮಗ್ರಿಗಾಗಿ ಸೊಸೈಟಿಗಳ ಮುಂದೆ ಸರದಿ ನಿಲ್ಲುವಂತಿಲ್ಲ.

ವೀರಾಜಪೇಟೆ ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಕೊರೊನಾ ಜಾಗೃತಿ ಸಮಿತಿ ಸಭೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವದನ್ನು ಸಭೆಯಲ್ಲಿ ವಿಚಾರ ವಿನಿಮಯ ಮಾಡಲಾಯಿತು.

ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾದ ನಂತರ ಕುಟ್ಟ ಹಾಗೂ ಪಾಲಿಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಲಾ ೫೦ ಮಂದಿ ಸಾಮರ್ಥ್ಯದ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸುವಂತೆ ತೀರ್ಮಾನಿಸಲಾಯಿತು.

ಕೊರೊನಾ ಷರತ್ತು ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುವುದು. ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನುಕೈಗೊಳ್ಳಲು ಸಮಿತಿ ತೀರ್ಮಾನಿಸಿತು.

ಜಾಗೃತಿ ಸಮಿತಿ ಸಭೆಯಲ್ಲಿ ಡಿ.ವೈಎಸ್.ಪಿ. ಜಯಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜು, ತಾಲೂಕು ತಹಶೀಲ್ದಾರ್ ಯೋಗಾನಂದ, ಶಿಕ್ಷಣಾಧಿಕಾರಿ, ಪಟ್ಟಣ ಪಂಚಾಯಿತಿ ಅಧಿಕಾರಿ ಎನ್.ಪಿ. ಹೇಮ್‌ಕುಮಾರ್, ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಕಚೇರಿಯ ಫ್ಲೆöÊಯಿಂಗ್ ಸ್ಕಾ÷್ವಡ್ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.