ಮಡಿಕೇರಿ, ಮೇ ೪: ಕೊಡಗು ಜಿಲ್ಲಾ ವ್ಯಾಪ್ತಿಯ ವಿದ್ಯುತ್ ವಿತರಣಾ ಕೇಂದ್ರದ ಫಿಡರ್‌ಗಳಲ್ಲಿ ತುರ್ತು ನಿವಾಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿದೆ. ಈ ಹಿನ್ನೆಲೆ ತಾ. ೫ ರಂದು (ಇಂದು) ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಇಇ ಅಶೋಕ್ ತಿಳಿಸಿದ್ದಾರೆ.

ಭಾಗಮಂಡಲ, ನಾಪೋಕ್ಲು, ಕಾವೇರಿ (ಕುಶಾಲನಗರ), ಸಿದ್ದಲಿಂಗಪುರ, ಮಾದಾಪುರ, ಇಂಜಲಗೇರಿ (ಸಿದ್ದಾಪುರ), ಚೆಂಬೆಬೆಳ್ಳೂರು, ಗೋಣಿಕೊಪ್ಪ, ಹಾತೂರು, ನಲ್ಲೂರು ಮತ್ತು ಹೈಸೊಡ್ಲುರು ಫೀಡರ್‌ಗಳ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಇಇ ಕೋರಿದ್ದಾರೆ.