ವೀರಾಜಪೇಟೆ, ಮೇ ೪: ವೀರಾಜಪೇಟೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿಗೆ ಸೇರಿದ ಕಡಂಗ ಗ್ರಾಮದಲ್ಲಿ ಇಂದು ಪಂಚಾಯಿತಿ ವತಿಯಿಂದ ಕಡಂಗದ ಮುಖ್ಯ ರಸ್ತೆ, ಗಣಪತಿ ದೇವಸ್ಥಾನ, ಮಸೀದಿ, ಎಡಪಾಲ ರಸ್ತೆ, ಆಯುಷ್ ಆಸ್ಪತ್ರೆ, ಅಂಗನವಾಡಿ, ಬಸ್ ತಂಗುದಾಣ ಇನ್ನಿತರ ಪ್ರಮುಖ ಸ್ಥಳಗಳಿಗೆ ಸ್ಯಾನಿಟೈಸ್ ಮಾಡಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್, ಸದಸ್ಯರಾದ ಕೋಡಿರ ವಿನೋದ್, ಜುಬೇರ್, ಜಕ್ರಿಯ, ರಜಾಕ್, ಸಲಾಂ, ರಾಜೀಕ್ ಸೇರಿದಂತೆ ಇನ್ನಿತರ ಪ್ರಮುಖರು ಭಾಗವಹಿಸಿದ್ದರು.