ಮಡಿಕೇರಿ, ಮೇ ೪: ವೀರಾಜಪೇಟೆ ವಲಯದ ವ್ಯಾಪ್ತಿಯ ಯಾವುದೇ ಊರ್ಜಿತ ದಾಖಲೆಗಳಿಲ್ಲದೆ ತೇಗ ಮರಗಳ ೦೪ ಸೈಜು ೦.೧೭೦ ಘ.ಮೀ. ಹಾಗೂ ತೇಗ ಮರದ ೦೧ ಬಿಲ್ಲೇಟ್ಸ್ ೦.೦೨೦ ಘ.ಮೀ.ಗಳನ್ನು ಸಾಗಿಸುವ ಸಂದರ್ಭದಲ್ಲಿ ೨೦೨೦ರ ಮೇ ೧೯ ರಂದು ಅರಣ್ಯ ಮೊಕದ್ದಮೆ ಸಂಖ್ಯೆ ೦೮/೨೦೨೦-೨೧ ನ್ನು ದಾಖಲಿಸಿ ವಾಹನ ನೋಂದಣಿ ಸಂಖ್ಯೆ ಕೆಎ ೦೪ ಪಿ ೬೪೮೦ ಅಸೆಂಟ್ ಕಾರು (ಇಂಜಿನ್ ಸಂಖ್ಯೆ ಉUಖಿಖಿಇಙಒ೦೦೫೭೧೭ ಮತ್ತು ಚಾಸಿಸ್ ಸಂಖ್ಯೆ ಒಂಅಊ೪೧ಉಖಙಒ೦೦೫೭೧೧) ನ್ನು ಮತ್ತು ಸವತ್ತುಗಳನ್ನು ಸರ್ಕಾರದ ಪರ ಅಮಾನತ್ತು ಪಡಿಸಿಕೊಳ್ಳಲಾಗಿತ್ತು.
ಆದರೆ ಈವರೆಗೂ ಸಂಬAಧಪಟ್ಟ ವಾಹನದ ಬಗ್ಗೆ ಯಾರಿಂದಲೂ ಹಕ್ಕುಭಾಧ್ಯತೆ ಇರುವುದಿಲ್ಲ. ಆದ್ದರಿಂದ ಈ ವಾಹನದ ನಿಜವಾದ ಮಾಲೀಕರು ಯಾರದಾರೂ ಇದ್ದಲ್ಲಿ, ವಾಹನದ ಮಾಲೀಕತ್ವವನ್ನು ರುಜುವಾತುಪಡಿಸಲು ಸಂಪೂರ್ಣ ದಾಖಲಾತಿಗಳೊಂದಿಗೆ ನಿಗದಿತ ಅವಧಿಯೊಳಗೆ ಅಹವಾಲನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ವೀರಾಜಪೇಟೆ ವಿಭಾಗ, ವೀರಾಜಪೇಟೆ ಕಚೇರಿಗೆ ಸಲ್ಲಿಸಬಹುದಾಗಿದೆ. ಯಾವುದೇ ಅಹವಾಲು ಬಾರದಿದ್ದಲ್ಲಿ ಕರ್ನಾಟಕ ಅರಣ್ಯ ಕಾಯ್ದೆ ೧೯೬೩ರ ವಿಧಿ ೭೧(ಎ)ಯಿಂದ (ಜಿ) ಪ್ರಕಾರ ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ವೀರಾಜಪೇಟೆ ವಿಭಾಗದ ಉಪ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.