ಮಡಿಕೇರಿ, ಮೇ ೪: ಹಾಕತ್ತೂರು ತೊಂಬತುಮನೆಯ ಧನುಕುಮಾರ್ ಎಂಬವರ ಮನೆಗೆ ಸಿಡಿಲು ಬಡಿದು ಅಪಾರ ನಷ್ಟ ಉಂಟಾಗಿದೆ. ಇಂದು ೩ ಗಂಟೆಗೆ ಬಡಿದ ಸಿಡಿಲಿಗೆ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಟಿವಿ ಹಾಗೂ ಇನ್ನಿತರ ಎಲೆಕ್ಟಾçನಿಕ್ ವಸ್ತುಗಳು ಸುಟ್ಟುಹೋಗಿ ನಷ್ಟ ಉಂಟಾಗಿದೆ.