ಅಮ್ಮತ್ತಿ, ಮೇ ೪: ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ಅಧೀನದ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ವತಿಯಿಂದ ನಡೆಸಲಾದ ವಾರ್ಷಿಕ ಪಬ್ಲಿಕ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ.

ಐದನೇ ತರಗತಿ ಪರೀಕ್ಷೆಯಲ್ಲಿ ಕಬಡಕೇರಿಯ ಅಫ್ಲಾಲ್ ಬಿ.ಎ ಜಿಲ್ಲೆಗೆ ಪ್ರಥಮ ಹಾಗೂ ಕೂಡಿಗೆಯ ಶಿಫಾನಾ ಟಿ.ಎ. ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಏಳನೇ ತರಗತಿ ಪರೀಕ್ಷೆಯಲ್ಲಿ ಹುಂಡಿ ಗ್ರಾಮದ ಜುರೈಜ್ ಪಿ.ಎಸ್ ಪ್ರಥಮ, ಕೊಂಡAಗೇರಿಯ ಸಫ್ವಾನ್ ಹೆಚ್.ಎಂ ದ್ವಿತೀಯ. ಹತ್ತನೆ ತರಗತಿ ಪರೀಕ್ಷೆಯಲ್ಲಿ ಮಂಜಿಕೆರೆಯ ಇ.ಐ. ಇರ್ಫಾನಾ ಪ್ರಥಮ, ಸುಂಟಿಕೊಪ್ಪದ ಅಝ್ಮೀಯಾ ಜಿ.ಹೆಚ್. ದ್ವಿತೀಯ ಸ್ಥಾನ. ಹನ್ನೆರಡನೆ ತರಗತಿ ಪರೀಕ್ಷೆಯಲ್ಲಿ ಸುಂಟಿಕೊಪ್ಪದ ಹನ್ನತ್ ಜಿ.ಹೆಚ್. ಪ್ರಥಮ ಹಾಗೂ ಅದೇ ಮದ್ರಸಾದ ಶಮ್ನಾ ಜಾಸ್ಮಿನ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಜಿಲ್ಲೆಯ ಒಟ್ಟು ಫಲಿತಾಂಶ ಶೇ. ೯೮.೭೯ ಆಗಿದ್ದು, ಲಾಕ್‌ಡೌನ್ ವೇಳೆಯಲ್ಲೂ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಫಲ ಎದ್ದು ಕಾಣುತ್ತಿದೆ ಎಂದು ಕೊಡಗು ಜಿಲ್ಲಾ ಸುನ್ನಿ ಜಂಯ್ಯಿಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಮುಸ್ತಫಾ ಸಖಾಫಿ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಖಾಫಿ ಎಮ್ಮೆಮಾಡು ತಿಳಿಸಿದ್ದಾರೆ.