ಮಡಿಕೇರಿ, ಮೇ ೪: ಕೊಡಗು ಜಿಲ್ಲೆಯಲ್ಲಿ ರಕ್ತದ ಅಗತ್ಯತೆ ಮನಗಂಡು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮರಗೋಡು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರವನ್ನು ಮರಗೋಡು ಗ್ರಾಮದಲ್ಲಿ ಆಯೋಜಿಸಲಾಗಿತ್ತು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತನಿಧಿ ಕೇಂದ್ರದ ವತಿಯಿಂದ ನಿರ್ವಹಿಸಲ್ಪಟ್ಟ ಶಿಬಿರದಲ್ಲಿ ೩೭ ಮಂದಿಯಿAದ ೩೭ ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಪಿ.ಎಂ. ಸಂದೀಪ್, ಮರಗೋಡು ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ನಿಶಾಂತ್ ಪಿ.ಕೆ., ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ. ಪ್ರಿಯದರ್ಶಿನಿ ಚಂಗಪ್ಪ, ಮಿಸ್ಟಿ ಹಿಲ್ಸ್ನ ಪೈಕೇರ ಮನೋಹರ್ ಪಾಲ್ಗೊಂಡಿದ್ದರು.

ಕೊರೊನಾ ಹಿನ್ನೆಲೆ ಜಿಲ್ಲೆಯಲ್ಲಿ ರೋಗಿಗಳಿಗೆ ಅಗತ್ಯವಾದ ರಕ್ತದ ಸಂಗ್ರಹಣೆಗಾಗಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯು ಕರೆ ನೀಡಿದ್ದ ರಕ್ತದಾನ ಮಾಡಿ ಎಂಬ ಸಂದೇಶದ ಹಿನ್ನೆಲೆ ಮಿಸ್ಟಿ ಹಿಲ್ಸ್ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಮರಗೋಡು ಗ್ರಾಮದಲ್ಲಿ ರಕ್ತದಾನ ಶಿಬಿರ ಆಯೋಜಿಸಿತ್ತು ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಎಂ. ಸಂದೀಪ್ ತಿಳಿಸಿದ್ದಾರೆ.