ಮಡಿಕೇರಿ, ಮೇ ೪: ಕೊಡಗು ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಹಾಗೂ ಶುಕ್ರವಾರ ಮಾತ್ರ ಮಧ್ಯಾಹ್ನದವರೆಗೆ ವ್ಯಾಪಾರ ವಹಿವಾಟು ತುರ್ತು ಸೇವೆಗಳಿಗೆ ಜಿಲ್ಲಾಡಳಿತ ಅನುಮತಿ ನೀಡಿರುವ ಹಿನ್ನೆಲೆ ಇಂದು ಮಧ್ಯಾಹ್ನದವರೆಗೆ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಬಿರುಸಿನಿಂದ ನಡೆದು ಮಧ್ಯಾಹ್ನ ೧೨ ಗಂಟೆಯ ಬಳಿಕ ಕೊಡಗು ಸಂಪೂರ್ಣ ಸ್ತಬ್ಧವಾಯಿತು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೆಳಗ್ಗಿನಿಂದ ಬಿರುಸಿನ ವ್ಯಾಪಾರ ವಹಿವಾಟು ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಜನತೆ ಅಗತ್ಯ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿಸಿಕೊಂಡರು. ಅಂಗಡಿ ಮಳಿಗೆಗಳ ಮುಂಭಾಗ ಜನಜಂಗುಳಿ ಕಂಡು ಬಂತು. ವಾಹನಗಳ ಸಂಖ್ಯೆಯೂ ಅಧಿಕಗೊಳ್ಳುವುದರೊಂದಿಗೆ ಕೆಲವೆಡೆ ‘ಟ್ರಾಫಿಕ್ ಜಾಂ’ ಉಂಟಾಗಿತ್ತು. ಪೊಲೀಸರು ಎಂದಿನAತೆ ಜನತೆ ಕೊರೊನಾ ನಿಯಮ ಉಲ್ಲಂಘಿಸದAತೆ; ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಕಾರ್ಯನಿರ್ವಹಿಸುವುದರ ಜೊತೆಗೆ ಸುಗಮ ವಾಹನ ಸಂಚಾರಕ್ಕೆ ಕ್ರಮಕೈಗೊಂಡರು. ವಾರದಲ್ಲಿ ಎರಡು ದಿನ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶವಿರುವ ಹಿನ್ನೆಲೆಯಲ್ಲಿ ಜನತೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದುದು ಗೋಚರಿಸಿತು. ಮದ್ಯದಂಗಡಿಗಳಲ್ಲೂ ವ್ಯಾಪಾರ ಬಿರುಸಿನಿಂದ ನಡೆಯಿತು.
ಮಧ್ಯಾಹ್ನ ೧೨ ಗಂಟೆಯಾಗುತ್ತಿದ್ದAತೆ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟವು. ಜನಸಂಚಾರಕ್ಕೂ ‘ಬ್ರೇಕ್’ ಬಿತ್ತು. ಆದರೆ ೧೨ ಗಂಟೆಯ ಬಳಿಕವೂ ಬೈಕ್, ಕಾರುಗಳಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಮಂದಿಗೆ ಪೊಲೀಸರು ಬಿಸಿ ಮುಟ್ಟಿಸಿದರು. ಮಾಸ್ಕ್ ಧರಿಸದ ವಾಹನ ಸವಾರರಿಗೆ ದಂಡದೊAದಿಗೆ, ವೈದ್ಯಕೀಯ ಸೇವೆಗೆ ನಿಯೋಜನೆಗೊಂಡಿದ್ದರೂ ಗುರುತಿನ ಚೀಟಿ ಹೊಂದದೆ ಓಡಾಡುತ್ತಿದ್ದವರಿಗೆ ಖಾಕಿ ಪಡೆ ಬೈಗುಳದ ರುಚಿ ತೋರಿಸಿತು. ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಅನಗತ್ಯ ವಾಹನ ಸಂಚಾರಕ್ಕೆ ತಡೆಯೊಡ್ಡಿತು. ಆರೋಗ್ಯ ತುರ್ತು ಸೇವೆಗಳಿಗೆ ತೆರಳುತ್ತಿದ್ದವರು ಹೊಂದಿದ್ದ ವೈದ್ಯಕೀಯ ವಿವರ ಇತ್ಯಾದಿಗಳನ್ನು ಪರಿಶೀಲಿಸಿ ಸಂಚಾರಕ್ಕೆ ಅವಕಾಶ ನೀಡಲಾಯಿತು. ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್‌ಗಳು ಎಂದಿನAತೆ ಕಾರ್ಯನಿರ್ವಹಿಸಿದವು. ಕಟ್ಟಡ ನಿರ್ಮಾಣ ಸಾಮಗ್ರಿ, ವಾಹನ, ತರಕಾರಿ, ಗ್ಯಾಸ್, ಪೆಟ್ರೋಲ್ ಸಾಗಿಸುವ ವಾಹನಗಳಿಗೆ ಸಂಚರಿಸಲು ಅವಕಾಶ ನೀಡಲಾಗಿತ್ತು.
ಸಿದ್ದಾಪುರ: ಸಿದ್ದಾಪುರದ ಸುತ್ತಮುತ್ತಲ ಪ್ರದೇಶಗಳ ಕಾರ್ಮಿಕರು ಸೇರಿದಂತೆ ಇತರ ಮಂದಿ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಸಂಚಾರ ಇಲ್ಲದೆ ಖಾಸಗಿ ವಾಹನ ಮಾಲೀಕರು ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದರು. ಆದರೆ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಬಸ್ ನಿಲ್ದಾಣದ ಬಳಿ ಸಿದ್ದಾಪುರದ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಸ್ ನಿಲ್ದಾಣಕ್ಕೆ ವಾಹನಗಳು ಬರದಂತೆ ಕ್ರಮಕೈಗೊಂಡರು.
ಈತನ್ಮಧ್ಯೆ ಬಸ್ ನಿಲ್ದಾಣದಲ್ಲಿ ವಾಹನಗಳು ಇಲ್ಲದ ಕಾರಣ ತರಕಾರಿ ವ್ಯಾಪಾರಿಗಳು ಬಸ್ ನಿಲ್ದಾಣದ ಸುತ್ತಲೂ ತರಕಾರಿ ವ್ಯಾಪಾರವನ್ನು ಮಾಡುತ್ತಿದ್ದುದು ಕಂಡುಬAತು. ಅಂಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದಂತೆ ಪೊಲೀಸರು ಮುಂಜಾಗ್ರತಾ ಕ್ರಮಕೈಗೊಂಡರು. ೧೨ ಗಂಟೆ ಬಳಿಕ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಪೊಲೀಸರು ಸೂಚನೆ ನೀಡಿದರು ಸಿದ್ದಾಪುರದ ಗುಹ್ಯ ಗ್ರಾಮದ ಕಕ್ಕಟ್ಟು ಕಾಡು ಭಾಗದಲ್ಲಿ ನಿರ್ಬಂಧಿತÀ ವಲಯಕ್ಕೆ ವಿವಿಧ ಸಂಘಟನೆಗಳಿAದ ಹಾಗೂ ಜನಪ್ರತಿನಿಧಿಗಳಿಂದ ಅಗತ್ಯವಸ್ತುಗಳ ಕಿಟ್ ಗಳನ್ನು ವಿತರಿಸಲಾಯಿತು.
ಚೆಟ್ಟಳ್ಳಿ: ಚೆಟ್ಟಳ್ಳಿ ಪಟ್ಟಣದಲ್ಲಿ ಸಾರ್ವಜನಿಕರು ಬೆಳಗ್ಗಿನಿಂದಲೇ ನಿತ್ಯಬಳಕೆಯ ತರಕಾರಿ ದಿನಸಿ ಸಾಮಗ್ರಿಗಳನ್ನು ಅಂಗಡಿಗಳ ಮುಂದೆ ನಿಂತು ಖರೀದಿಸುವಲ್ಲಿ ನಿರತರಾಗಿದ್ದರು. ಒಂದೆರಡು ಹೊಟೇಲ್‌ಗಳಲ್ಲಿ ಪಾರ್ಸಲ್ ನೀಡಲಾಗುತಿತ್ತು. ಮದ್ಯಪ್ರಿಯರು ಎರಡು ದಿನಕ್ಕೆ ಬೇಕಾದ ಮದ್ಯವನ್ನು ಖರೀದಿಸುವಲ್ಲಿ ತಲ್ಲೀನರಾಗಿದ್ದುದು ಕಂಡು ಬಂತು. ಮಧ್ಯಾಹ್ನ ೧೨ ಗಂಟೆಗೆ ಅಂಗಡಿ ಮಳಿಗೆಗಳನ್ನು ಮುಚ್ಚಲಾಯಿತು. ಬ್ಯಾಂಕ್ ಹಾಗೂ ಸಹಕಾರಿ ಸಂಘ ಕಾರ್ಯನಿರ್ವಹಿಸುತಿದ್ದು ಗ್ರಾಹಕರು ಗೊಬ್ಬರವನ್ನು ಖರೀದಿಸುತ್ತಿದ್ದುದು ಕಂಡುಬAತು.
ಕೂಡಿಗೆ: ಕುಶಾಲನಗರ ತಾಲೂಕು ವ್ಯಾಪ್ತಿಯ ಶಿರಂಗಾಲ ಹೆಬ್ಬಾಲೆ ತೊರೆನೂರು ಕೂಡಿಗೆ ಕೂಡುಮಂಗಳೂರು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಧ್ಯಾಹ್ನದ ಬಳಿಕ ಸಂಪೂರ್ಣ ಬಂದ್ ಅಗಿತ್ತು.
ಬೆಳಿಗ್ಗೆ ೬ ಗಂಟೆಯಿAದ ೧೨ ಗಂಟೆಗಳವೆರೆಗೆ ಆಯಾ ಗ್ರಾಮದ ಸಾರ್ವಜನಿಕರು ದಿನಸಿ ಅಂಗಡಿಗಳಲ್ಲಿ ತರಕಾರಿ, ಮಾಂಸ, ಸಾಮಗ್ರಿ ಖರೀದಿಗೆ ಮುಗಿಬಿದ್ದುದು ಕಂಡುಬAತು. ಕೊಡಗಿನ ಗಡಿ ಭಾಗದಲ್ಲಿ ಸಂಪೂರ್ಣವಾಗಿ ಗೇಟ್ ಬಂದ್ ಮಾಡಲಾಗಿದೆ. ಹೊರ ಜಿಲ್ಲೆ ಹೊರ ರಾಜ್ಯದಿಂದ ಬರುವವರಿಗೆ ಜಿಲ್ಲಾಡಳಿತದ ನಿರ್ದೇಶನದಂತೆ ಶಿರಂಗಾಲ ಗಡಿ ಭಾಗದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಸೀಲ್ ಹಾಕಲಾಗುತ್ತಿದೆ ಅನವಶ್ಯಕವಾಗಿ ಓಡಾಡುವ ಬೈಕ್ ಸವಾರರಿಗೆ ದಂಡ ವಿಧಿಸಲಾಗುತ್ತಿದೆ.
ನಿಯಮ ಉಲ್ಲಂಘಿಸಿದವರಿಗೆ ದಂಡ
ಮುಳ್ಳೂರು: ಕೋವಿಡ್ ಹಿನ್ನೆಲೆ ಲಾಕ್‌ಡೌನ್‌ಗೊಂಡಿದ್ದು, ಮಂಗಳವಾರ ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೧೨ ಗಂಟೆ ವರೆಗೆ ಸಾರ್ವಜನಿಕರ ಓಡಾಟಕ್ಕೆ ಬಿಡುವುಕೊಟ್ಟಿರುವ ಅವಧಿಯಲ್ಲಿ ಶನಿವಾರಸಂತೆ ಪಟ್ಟಣದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಸಾರ್ವಜನಿಕರು ಮತ್ತು ಗ್ರಾಹಕರಿಗೆ ಹಾಗೂ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿದರು. ಬಿಡುವಿನ ಅವಧಿಯಲ್ಲಿ ಮಾಸ್ಕ್ ಧರಿಸದೆ ದಿನಸಿ, ತರಕಾರಿ ಕೊಳ್ಳಲು ಬಂದ ಗ್ರಾಹಕರು, ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಪಾದಚಾರಿಗಳು ಮತ್ತು ಸಾರ್ವಜನಿಕರಿಗೆ ಪೊಲೀಸರು ದಂಡ ವಿಧಿಸಿದರು. ಹೆಲ್ಮೆಟ್ ಧರಿಸದೆ ಪಟ್ಟಣದಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆದು ನಿಲ್ಲಿಸಿದ ಪೊಲೀಸರು ದಂಡ ವಿಧಿಸಿದರು. ಪೊಲೀಸ್ ಠಾಣಾಧಿಕಾರಿ ದೇವರಾಜ್ ನೇತೃತ್ವದಲ್ಲಿ ಸಿಬ್ಬಂದಿಗಳು ದಂಡ ವಿಧಿಸುವ ಕಾರ್ಯಾಚರಣೆ ನಡೆಸಿದರು. ೧೨ ಗಂಟೆ ಬಳಿಕ ಪಟ್ಟಣ ಸಂಪೂರ್ಣ ಬಂದ್ ಆಯಿತು.
*ವೀರಾಜಪೇಟೆ: ವಾರದಲ್ಲಿ ಎರಡು ದಿನ ಮಾತ್ರ ಅಗತ್ಯವಸ್ತು ಹಾಗೂ ದಿನಸಿ ಖರೀದಿಗೆ ಅವಕಾಶ ನೀಡಿದ ಹಿನ್ನೆಲೆ, ವೀರಾಜಪೇಟೆ ನಗರದಲ್ಲಿ ಇಂದು ಜನಜಾತ್ರೆ ಕಂಡುಬAತು.
ಇನ್ನು ಶುಕ್ರವಾರದವರೆಗೂ ಅಂಗಡಿ-ಮುAಗಟ್ಟು ತೆರೆಯುವುದಿಲ್ಲ ಎನ್ನುವ ಭೀತಿಯಲ್ಲಿ ವೀರಾಜಪೇಟೆ ಗ್ರಾಮಾಂತರ ಮತ್ತು ನಗರದ ಜನತೆ ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದರು. ಇದರಿಂದ ಅಂಗಡಿ ಮಾಲೀಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎಷ್ಟೇ ವಿನಂತಿಸಿಕೊAಡರು ಜನತೆ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಇದರಿಂದಾಗಿ ಗಡಿಯಾರ ಕಂಬದಿAದ ಮಟನ್ ಮಾರ್ಕೆಟ್ ರಸ್ತೆವರೆಗೆ ವಾಹನಗಳು ಸಾಲುಗಟ್ಟಿ ನಿಂತುಕೊAಡು ಸುಮಾರು ಒಂದೂವರೆ ಗÀಂಟೆಗಳ ಕಾಲ ಟ್ರಾಫಿಕ್ ಜ್ಯಾಂ ಉಂಟಾಯಿತು.
ಗೋಣಿಕೊಪ್ಪಲು: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಮುಂಜಾನೆ ಆರು ಗಂಟೆಯಿAದಲೇ ವಾಹನ ಸಂಚಾರ ಮಾಮೂಲಿಗಿಂತ ಅಧಿಕವಾಗಿತ್ತು. ಪೊನ್ನಂಪೇಟೆ ಜಂಕ್ಷನ್, ಬೈಪಾಸ್ ರಸ್ತೆಯಲ್ಲಿ ವಾಹನಗಳು ಸಾಲು, ಸಾಲಾಗಿ ಕಂಡುಬAದವು. ಆಯಾಕಟ್ಟಿನ ಪ್ರದೇಶದಲ್ಲಿ ಪೋಲಿಸರನ್ನು ನಿಯೋಜಿಸಲಾಗಿತ್ತಾದರೂ ಒಂದೇ ಸಮನೆ ವಾಹಗಳು ವಿವಿಧ ಭಾಗಗಳಿಂದ ಆಗಮಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳಾದ ದಿನಸಿ, ಮಾಂಸ, ಮೀನುಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ದಿನಸಿ, ಮೀನು, ಮಾಂಸದ ಅಂಗಡಿಗಳಲ್ಲಿ ಗ್ರಾಹಕರ ಸಾಲು ಕಂಡುಬAದವು. ಮಾರುಕಟ್ಟೆ ವ್ಯಾಪ್ತಿಯಲ್ಲಿ ತರಕಾರಿಗಳಿಗೆ ಅಷ್ಟಾಗಿ ಜನರು ಕಂಡು ಬರಲಿಲ್ಲ. ಬೈಪಾಸ್ ರಸ್ತೆ, ನಗರದ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಹೆಚ್ಚಾಗಿ ತರಕಾರಿ ಅಂಗಡಿಗಳು ದಿಢೀರನೆ ತೆರೆದು ವ್ಯಾಪಾರ ವಹಿವಾಟು ನಡೆಸಿದವು. ಇದರಿಂದಾಗಿ ತರಕಾರಿ ಮಾರುಕಟ್ಟೆ ಬಳಿ ಜನರು ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ಮೊಬೈಲ್ ಶಾಪ್‌ಗಳು ತೆರೆಯದ ಕಾರಣ ಕರೆನ್ಸಿ ಹಾಕಿಸಿಕೊಳ್ಳಲು ಜನರು ಪರದಾಡಿದರು.
ಖಾಸಗಿ ಬಸ್ ಸಂಚಾರ ಇಲ್ಲದ ಕಾರಣ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಪಾರ್ಕಿಂಗ್ ಮಾಡಿದ್ದವು. ವಾಹನ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್ ಇನ್ಸ್ಪೆಕ್ಟರ್ ಸುಬ್ಬಯ್ಯ ತಾವೇ ತಮ್ಮ ಪೊಲೀಸ್ ಜೀಪಿನಲ್ಲಿ ಸುತ್ತಾಟ ನಡೆಸಿ, ಅಡ್ಡಾದಿಡ್ಡಿ ನಿಲ್ಲಿಸಲಾಗಿದ್ದ ವಾಹಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಹಸಿಮೀನು ಮಳಿಗೆಗಳಲ್ಲಿ ೧೧ ಗಂಟೆಯ ವೇಳೆಯಲ್ಲಿ ಮೀನುಗಳು ಖಾಲಿಯಾದವು.
೧೨ ಗಂಟೆಯಾಗುತ್ತಿದ್ದAತೆಯೇ ಅಂಗಡಿ ಮುಂಗಟ್ಟುಗಳು ಮುಚ್ಚಿದವು. ಮಧ್ಯಾಹ್ನ ನಂತರದಲ್ಲಿ ನಗರದಲ್ಲಿ ಸಂಪೂರ್ಣ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಅಲ್ಲೊಂದು ಇಲ್ಲೊಂದು ವಾಹನ ಹೊರತುಪಡಿಸಿ ಬೇರೆ ವಾಹಗಳು ಕಂಡುಬರಲಿಲ್ಲ.
ಎಟಿಎA ಕೇಂದ್ರದಲ್ಲಿ ಕ್ಯೂ..!
ಗೋಣಿಕೊಪ್ಪ ನಗರದ ಕೆಲವು ಬ್ಯಾಂಕ್‌ಗಳ ಎಟಿಎಂ ಕೇಂದ್ರ ಮುಂದೆ ಜನರು ಹಣ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದರು. ಬಹುತೇಕ ಎಟಿಎಂ ಕೇಂದ್ರದಲ್ಲಿ ಹಣ ಇಲ್ಲದೆ ಜನರು ಸಂಕಷ್ಟ ಎದುರಿಸಿದರು.
ಪೊನ್ನಂಪೇಟೆ: ಪೊನ್ನಂಪೇಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಬೆಳಿಗ್ಗೆಯಿಂದಲೇ ಸಾರ್ವಜನಿಕರು ಪಟ್ಟಣಕ್ಕೆ ಆಗಮಿಸಿ ಅಗತ್ಯ ವಸ್ತು ಖರೀದಿಸಿದರು. ಮೀನು, ಮಾಂಸ ವ್ಯಾಪಾರ ಭರ್ಜರಿಯಾಗಿತ್ತು. ೧೨ ಗಂಟೆಯ ಒಳಗೆ ಎಲ್ಲಾ ಮಾಂಸ ಖಾಲಿಯಾಗಿದ್ದರಿಂದ ಕೆಲವು ಗ್ರಾಹಕರು ಬರಿಗೈಯಲ್ಲಿ ಮನೆಗೆ ಹಿಂತಿರುಗಿದರು. ಮದ್ಯ ಮಾರಾಟ ಕೂಡ ಜೋರಾಗಿತ್ತು.
ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕು ತಡೆಗಟ್ಟಲು ಪರಿಷ್ಕೃತ ನಿಯಮ ಜಾರಿಗೊಳಿಸಿದ ಹಿನ್ನಲೆಯಲ್ಲಿ ಕುಶಾಲನಗರದಲ್ಲಿ ಮಂಗಳವಾರ ಹೆಚ್ಚಿನ ಜನಸಂಚಾರ ಕಂಡುಬAತು. ಬೆಳಗ್ಗೆ ೬ ಗಂಟೆಯಿAದ ರಸ್ತೆಯುದ್ದಕ್ಕೂ ವಾಹನಗಳ ಸಂಚಾರ ಏರಿಕೆಯಾಗುವುದರೊಂದಿಗೆ ಬಹತೇಕ ಅಂಗಡಿ ಮುಗ್ಗಟ್ಟುಗಳಲ್ಲಿ ಗ್ರಾಹಕರ ನೂಕು-ನುಗ್ಗಲು ಗೋಚರಿಸಿತು. ಮದ್ಯದಂಗಡಿಗಳಲ್ಲಿ ಕೂಡ ಮದ್ಯಪ್ರಿಯರ ಸರತಿಸಾಲು ಅಧಿಕವಾಗಿತ್ತು. ಮಧ್ಯಾಹ್ನ ೧೨ ಗಂಟೆಯಾಗುತ್ತಲೇ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆಗುವುದರೊಂದಿಗೆ ಪೊಲೀಸರು ಪಟ್ಟಣವನ್ನು ಸಂಪೂರ್ಣ ಹತೋಟಿಗೆ ತೆಗೆದುಕೊಳ್ಳುವುದರೊಂದಿಗೆ ಗಡಿಭಾಗದಲ್ಲಿ ಅನವಶ್ಯಕ ಓಡಾಟ ನಡೆಸುತ್ತಿದ್ದ ಜನರಿಗೆ ಲಾಠಿ ರುಚಿ ತೋರಿಸುತ್ತಿದ್ದ ದೃಶ್ಯ ಕಂಡುಬAತು.
ಸುAಟಿಕೊಪ್ಪ: ಜನತಾಕರ್ಪ್ಯೂನಿಂದ ವಾರದಲ್ಲಿ ೨ ದಿನ ಮಾತ್ರ ಆಹಾರ ಸಾಮಗ್ರಿಗಳನ್ನು ಖರೀದಿಗೆ ನೀಡಿರುವುದರಿಂದ ಮಂಗಳವಾರ ಪಟ್ಟಣದಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ವಾಣಿಜ್ಯ ಬ್ಯಾಂಕ್ ಸಹಕಾರಿ ಬ್ಯಾಂಕುಗಳಲ್ಲಿ ಗ್ರಾಹಕರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂತು. ತರಕಾರಿ, ದಿನಸಿ, ಹಸಿಮೀನು, ಕೋಳಿ ಕುರಿ ಮಾಂಸಗಳನ್ನು ಕೊಂಡುಕೊಳ್ಳಲು ಗ್ರಾಹಕರು ಮುಗಿಬಿದ್ದರು. ಪಟ್ಟಣದ ಹೆದ್ದಾರಿಯಲ್ಲಿ ವಾಹನ ದಟ್ಟಣೆಯು ಕಂಡು ಬಂತು.
ನಾಡು ಕಛೇರಿ, ಕೃಷಿ ಇಲಾಖೆ, ಸೆಸ್ಕ್ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಜನಸಂಖ್ಯೆ ವಿರಳವಾಗಿತ್ತು. ವಾರದ ಮಂಗಳವಾರ ಮತ್ತು ಶುಕ್ರವಾರ ಮಾತ್ರ ತರಕಾರಿ, ದಿನಸಿ, ಹಸಿಮೀನು, ಕೋಳಿ, ಕುರಿ ಮಾಂಸ ಮಾರಾಟ ಮಾಡಲು ಬೆಳಿಗ್ಗೆ ೬ ಮಧ್ಯಾಹ್ನ ೧೨ರವರೆಗೆ ಜಿಲ್ಲಾಡಳಿತ ಆದೇಶಿಸಿತ್ತು. ಅದರಂತೆ ಮಂಗಳವಾರ ಎಲ್ಲಾ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.
ಕಡಂಗ: ಜಿಲ್ಲಾಡಳಿತ ಜಾರಿ ಮಾಡಿರುವ ಬಿಗಿಕ್ರಮವನ್ನು ಕಡಂಗ ಜನ ಪಾಲಿಸಿದ್ದು, ಬೆಳಿಗ್ಗೆ ೧೨ ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶವಿದ್ದರೂ ಜನ ಹೆಚ್ಚಾಗಿ ಅಂಗಡಿಗಳ ಕಡೆ ಬರಲಿಲ್ಲ. ಸಮಯ ಮುಗಿದ ನಂತರ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿದರು. ಅನವಶ್ಯಕವಾಗಿ ತಿರುಗಾಡುವ ವಾಹನಗಳನ್ನು ವಾಪಸ್ ಕಳುಹಿಸಿ ಎಚ್ಚರಿಕೆ ನೀಡಿದರು.
ಸೋಮವಾರಪೇಟೆ: ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ನೂತನವಾಗಿ ಜಾರಿಗೆ ತಂದಿರುವ ಪರಿಷ್ಕೃತ ನಿಯಮಾವಳಿಯನ್ನು ಸೋಮವಾರಪೇಟೆಯ ಜನತೆ ಕಟ್ಟುನಿಟ್ಟಾಗಿ ಪಾಲಿಸಿದರು. ಬೆಳಿಗ್ಗೆ ೬ ಗಂಟೆಯಿದ ಮಧ್ಯಾಹ್ನ ೧೨ ಗಂಟೆಯವರೆಗೆ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ನಡೆದು, ೧೨ ಗಂಟೆಯ ನಂತರ ಸಂಪೂರ್ಣ ಲಾಕ್‌ಡೌನ್ ಆಯಿತು. ಆರೋಗ್ಯ ಸಂಬAದಿತ ಮೆಡಿಕಲ್, ಕ್ಲಿನಿಕ್‌ಗಳು ಮಾತ್ರ ಸಂಜೆಯವರೆಗೂ ತೆರೆದಿದ್ದವು.
ಜಿಲ್ಲಾಡಳಿತದ ನೂತನ ಆದೇಶದ ಬಗ್ಗೆ ಮಾಹಿತಿ ಇರದ ಮಂದಿ ಮುಂದಿನ ೨ ದಿನಗಳಿಗೆ ಬೇಕಾಗುವಷ್ಟು ದಿನಸಿ, ತರಕಾರಿಗಳನ್ನು ಖರೀದಿಸಿ ಮನೆಗೆ ತೆರಳದರು. ೧೨ ಗಂಟೆಯ ನಂತರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ದಾರಿಗಳನ್ನು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಿದರು. ಸಕಾರಣವಿಲ್ಲದೇ ಪಟ್ಟಣದಲ್ಲಿ ಸುತ್ತುತ್ತಿದ್ದ ವಾಹನಗಳ ಚಾಲಕರಿಗೆ ಎಚ್ಚರಿಕೆ ನೀಡಿ, ವಾಪಸ್ ಕಳುಹಿಸಿದರು.
ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಸಿಬ್ಬಂದಿಗಳು ಪಟ್ಟಣದಲ್ಲಿ ಬೀಡುಬಿಟ್ಟು ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾಗದAತೆ ಕ್ರಮ ವಹಿಸಿದರು. ಪಟ್ಟಣದ ಮೆಡಿಕಲ್ ಮತ್ತು ಖಾಸಗಿ ಕ್ಲಿನಿಕ್‌ಗಳಲ್ಲಿ ಎಂದಿನAತೆ ಜನರ ಸಾಲು ಕಂಡು ಬಂತು. ಬಹುತೇಕ ಮಂದಿ ಜ್ವರ, ಶೀತ, ಕೆಮ್ಮು, ಬಿ.ಪಿ., ಶುಗರ್ ಖಾಯಿಲೆಗಳಿಗೆ ಚಿಕಿತ್ಸೆ, ಔಷಧಿಗಳನ್ನು ಪಡೆದರು.