ಮಡಿಕೇರಿ, ಮೇ ೪: ಕಳೆದ ಒಂದೂವರೆ ವರ್ಷಗಳಿಂದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮದನ್ ಮೋಹನ್ ಅವರು ಶುಕ್ರವಾರ ವಯೋನಿವೃತ್ತಿ ಹೊಂದಿದ್ದಾರೆ. ಮದನ್ ಮೋಹನ್ ಅವರಿಗೆ ಇಲಾಖೆಯ ಎಇಇ ಶಿವರಾಮ್, ಸುರೇಶ್, ಮೋಹನ್ ಕುಮಾರ್, ಇಂಜಿನಿಯರ್‌ಗಳು ಹಾಗೂ ಸಿಬ್ಬಂದಿಗಳು ಶಾಲು, ಫಲ ತಾಂಬೂಲ ನೀಡಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮದನ್ ಮೋಹನ್ ಅವರು ಕಳೆದ ಮಳೆಗಾಲ ಮತ್ತು ರಾಷ್ಟçಪತಿ ಅವರು ಕೊಡಗು ಜಿಲ್ಲೆಗೆ ಭೇಟಿ ಸಂದರ್ಭದಲ್ಲಿ ಜಿಲ್ಲಾಡಳಿತ ಜತೆ ಉತ್ತಮ ಕೆಲಸ ನಿರ್ವಹಿಸಲಾಯಿತು ಎಂದು ಹೇಳಿದರು