ವೀರಾಜಪೇಟೆ, ಮೇ ೪: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದ್ದು, ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗೂ ಸಿದ್ಧತೆ ನಡೆದಿದೆ. ಆಸ್ಪತ್ರೆಗೆ ಕೊರೊನಾ ರೋಗಿಗಳಿಗಾಗಿ ೨೧ ವಸ್ತುಗಳಿರುವ ಸುಮಾರು ೫೦ ಕಿಟ್‌ಗಳನ್ನು ರವಾನಿಸಿರುವುದಾಗಿ ತಹಶೀಲ್ದಾರ್ ಯೋಗಾನಂದ ತಿಳಿಸಿದ್ದಾರೆ.

ಆಸ್ಪತ್ರೆಯ ಪ್ರಾರಂಭದ ದಿನ ಯಾವುದೇ ಕೊರೊನಾ ಪಾಸಿಟಿವ್ ರೋಗಿ ದಾಖಲಾಗಿಲ್ಲ. ಆಸ್ಪತ್ರೆಯಲ್ಲಿ ತುರ್ತು ರೋಗಿಗಳಿಗೆ ಮಾತ್ರ ಆಕ್ಸಿಜನ್ ಅಲ್ಪಪ್ರಮಾಣದಲ್ಲಿ ದಾಸ್ತಾನಿರುವುದಾಗಿ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ತಿಳಿಸಿದರು.