*ಗೋಣಿಕೊಪ್ಪ, ಮೇ ೪: ಲಾಕ್‌ಡೌನ್‌ನಿಂದ ತೊಂದರೆಗೊಳಗಾದ ಸಂತ್ರಸ್ತರಿಗೆ ಹಾಗೂ ಪೌರಕಾರ್ಮಿಕರಿಗೆ ಗೋಣಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಮೂಲಕ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಕಾಡ್ಲಯ್ಯಪ್ಪ ನರ್ಸರಿ ಮಾಲೀಕ ಪ್ರಭಾ ಅವರು ಆಹಾರ ಕಿಟ್‌ಗಳನ್ನು ಒದಗಿಸಿದರು. ಗೋಣಿಕೊಪ್ಪಲು ಉಪನಿರೀಕ್ಷಕ ಸುಬ್ಬಯ್ಯ ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಮತ್ತು ಕೊರೊನಾ ಸಂಬAಧ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅಗತ್ಯ ಮಾಹಿತಿ ನೀಡಿದರು. ಈ ಸಂದರ್ಭ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ಸುರೇಶ್ ರೈ, ಸಹಪ್ರಮುಖರಾದ ಜಿ. ಮಂಜು, ಜ್ಯೋತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೇಶ್, ಕೆ. ಗೀತಾ ಹಾಜರಿದ್ದರು