ಸುಂಟಿಕೊಪ್ಪ, ಮೇ ೩: ಕೊರೊನಾದ ಸಂಕಷ್ಟದಲ್ಲಿದ್ದು, ಸರಕಾರ ಜನತಾ ಕರ್ಫ್ಯೂ ವಿಧಿಸಿದೆ. ಸ್ತಿçÃಶಕ್ತಿ ಸಂಘ ಹಾಗೂ ಸ್ವಸಹಾಯ ಸಂಘದವರು ಪಡೆದ ಸಾಲವನ್ನು ಮರುಪಾವತಿ ಮಾಡಲು ಕಾಲಾವಕಾಶ ನೀಡಿ ಸಾಲದ ಬಡ್ಡಿಯನ್ನು ಮನ್ನಾ ಮಾಡಬೇಕೆಂದು ಸ್ವಸಹಾಯ ಸಂಘಗಳ ಮಹಿಳೆಯರು ಆಗ್ರಹಿಸಿದ್ದಾರೆ.
ಕಳೆದ ವರ್ಷವೂ ಕೊರೊನಾ ಮಹಾಮಾರಿಯಿಂದ ಎಲ್ಲಾ ಕ್ಷೇತ್ರದಲ್ಲೂ ಅರ್ಥಿಕ ಸಂಕಷ್ಟವನ್ನು ಎದುರಿಸಿದ್ದು, ಕಳೆದ ಬಾರಿ ಸರಕಾರ ಸಾಲ ಮರುಪಾವತಿಗೆ ಕಾಲಾವಕಾಶ ನೀಡಿತ್ತು. ಜಿಲ್ಲಾಡಳಿತದ ವತಿಯಿಂದ ವಾಣಿಜ್ಯ ಬ್ಯಾಂಕು ಹಾಗೂ ಸಹಕಾರಿ, ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಗೆ ಒತ್ತಡ ಹೇರದಂತೆ ಆದೇಶ ನೀಡಿತ್ತು. ಈ ಬಾರಿಯೂ ಜನತಾ ಕರ್ಫ್ಯೂ ಇರುವುದರಿಂದ ಅರ್ಥಿಕ ಸಂಕಷ್ಟವಿದ್ದು ಜಿಲ್ಲಾಡಳಿತ ಈ ಬಾರಿಯೂ ಸೌಲಭ್ಯ ಒದಗಿಸಿಕೊಡಬೇಕೆಂದು ಪತ್ರಿಕಾ ಹೇಳಿಯಲ್ಲಿ ಮಹಿಳಾ ಸಂಘದವರು ಒತ್ತಾಯಿಸಿದ್ದಾರೆ.