ಗೋಣಿಕೊಪ್ಪಲು, ಮೇ ೩: ಕೊರೊನಾ ಎರಡನೇ ಅಲೆಯಿಂದ ಲಾಕ್ ಡೌನ್ ಇರುವದರಿಂದ ಅನೇಕ ನಿರಾಶ್ರಿತರು ಆಹಾರ ವಿಲ್ಲದೇ ಕಷ್ಟ ಪಡುತ್ತಿರುವುದನ್ನು ಮನಗಂಡ ಗೋಣಿಕೊಪ್ಪ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು ಪ್ರತಿದಿನ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸ್ಥಳಿಯ ದಾನಿಗಳ ಸಹಕಾರದಿಂದ ಮಾಡುತ್ತಿದ್ದಾರೆ.
ಸಂಜೆ ವೇಳೆಯಲ್ಲಿ ನಗರದಲ್ಲಿ ಹೊಟೇಲ್‌ಗಳು ಮುಚ್ಚಿರುವುದರಿಂದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಿಗೆ ಕಾಫಿ, ಬಿಸ್ಕತ್ತು ನೀಡುತ್ತಿದ್ದಾರೆ.ವಾಣಿಜ್ಯ ನಗರದಲ್ಲಿ ಅನೇಕ ಮಂದಿ ಭಿಕ್ಷುಕರು, ನಿರಾಶ್ರಿತರು ವಾಸವಿದ್ದು ಆಹಾರದಿಂದ ವಂಚಿತರಾಗಿದ್ದರು. ಇದೀಗ ಯುವಕರು ಒಟ್ಟಾಗಿ ಸೇರಿ ಮಾಡುತ್ತಿರುವ ಉತ್ತಮ ಕೆಲಸಕ್ಕೆ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಕಾಡ್ಲಯ್ಯಪ್ಪ ನರ್ಸರಿ ಮಾಲೀಕ ಪ್ರಭಾ, ಗೋಣಿಕೊಪ್ಪಲು ಪೊಲೀಸ್ ಉಪನಿರೀಕ್ಷಕ ಸುಬ್ಬಯ್ಯ, ಬಿಜೆಪಿ ಶಕ್ತಿ ಕೆಂದ್ರದ ಸುರೇಶ್ ರೈ, ಸಹ ಪ್ರಮುಖರಾದ ಜಿ. ಮಂಜು, ಜ್ಯೋತಿ ಗ್ರಾಮ ಪಂಚಾಯತಿ ಸದಸ್ಯರಾದ ಕೆ. ರಾಜೇಶ್ , ಕಾರ್ಯಕರ್ತೆ ಗೀತಾ ಮತ್ತಿತರರು ಹಾಜರಿದ್ದರು.