ಸ್ಥಳೀಯರಿಂದ ದೂರು-ಮೊಕದ್ದಮೆ ದಾಖಲು

ಶ್ರೀಮಂಗಲ, ಮೇ ೩: ಕುಟ್ಟ-ನಾಗರಹೊಳೆ ರಸ್ತೆಯಲ್ಲಿರುವ ಸಫಾರಿ ಇನ್ ಹೋಂಸ್ಟೇ ಮತ್ತು ರೆಸ್ಟೋರೆಂಟ್ ಮಾಲೀಕ ಮಂಜುನಾಥ್ ಹಾಗೂ ತನ್ನ ಕುಟುಂಬದವರು ಕೋವಿಡ್ ಸೋಂಕು ತಗುಲಿ ಚಿಕಿತ್ಸೆಯಲ್ಲಿದ್ದು, ವರದಿ ನಿರೀಕ್ಷೆಯಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿರುವಾಗಲೇ, ಕುಟ್ಟ ಪೊಲೀಸ್ ಠಾಣೆಯ ಪೇದೆಯೊಂದಿಗೆ ಹೆಚ್.ಡಿ. ಕೋಟೆಗೆ ಹೋಗಿ ಬಂದಿರುವ ಬಗ್ಗೆ ಇಬ್ಬರ ಮೇಲೆ ಕುಟ್ಟ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೋಮವಾರ ಬೆಳಿಗ್ಗೆ ೬ ಗಂಟೆಗೆ ಕುಟ್ಟದಿಂದ ಹೆಚ್.ಡಿ. ಕೋಟೆಯಲ್ಲಿರುವ ತನ್ನ ವ್ಯಾಪಾgಇತ್ತೀಚಿನ ದಿನಗಳಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬರುತ್ತಿದ್ದು, ಕಳೆದ ಮೂರು ದಿನಗಳಲ್ಲೇ ೫೩೦ ಮಂದಿಗೆ ಸೋಂಕು ದೃಢಪಟ್ಟಿದೆ. ಜನವರಿಯಿಂದ ಇಲ್ಲಿಯವರೆಗೆ ೧೪ ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ತಾಲೂಕಿನಲ್ಲಿ ಸದ್ಯಕ್ಕೆ ೧೪೦೦ ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.

ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸದ್ಯಕ್ಕೆ ೮೯ ಸಕ್ರಿಯ ಪ್ರಕರಣಗಳಿವೆ. ೩೪ ಕಂಟೈನ್‌ಮೆAಟ್ ಜೋನ್ ತೆರೆಯಲಾಗಿದ್ದು, ಹೊರ ಜಿಲ್ಲೆಯಿಂದ ಬಂದಿರುವ ೨೮ ಮಂದಿಯನ್ನು ಗುರುತಿಸಿ ಕ್ವಾರಂಟೈನ್ ಮಾಡಲು ಕ್ರಮ ವಹಿಸಲಾಗಿದೆ.

ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿ ೬೦ ಸಕ್ರಿಯ À ನೋಡಲು ಕುಟ್ಟ ಠಾಣೆಯ ಪೇದೆ ಹನುಮಂತ ಸಾಬ್ ಅವರ ಕಾರಿನಲ್ಲಿ, ಮಂಜುನಾಥ್ ತೆರಳಿದ್ದರು. ಇದಕ್ಕಾಗಿ ಹನುಮಂತ ಅವರು ಸೋಮವಾರ ಕರ್ತವ್ಯಕ್ಕೆ ರಜೆ ಹಾಕಿದ್ದರು.

ಸ್ಥಳೀಯ ಗ್ರಾಮಸ್ಥರಿಗೆ ಈ ವಿಚಾರ ಗೊತ್ತಾಗಿ ಜಿಲ್ಲಾಧಿಕಾರಿಗಳ ಸಹಾಯವಾಣಿಗೆ ದೂರು ನೀಡಿದರು. ಜಿಲ್ಲಾಧಿಕಾರಿ ಅವರು ತಕ್ಷಣ ಮಂಜುನಾಥ್ ಅವರು ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇದ್ದಾರೆಯೇ, ಇಲ್ಲವೇ ಎಂಬದನ್ನು ಖಚಿತಪಡಿಸಲು ಶ್ರೀಮಂಗಲ ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಮನೆಯಲ್ಲಿ ಪರಿಶೀಲಿಸಿದ ಹಿನ್ನೆಲೆ ಮಂಜುನಾಥ್ ಇಲ್ಲದಿರುವುದು ಖಚಿತವಾಗಿದೆ. ೧೧.೪೫ರ ವೇಳೆಗೆ ಇಬ್ಬರು ಹೆಚ್.ಡಿ. ಕೋಟೆಯಿಂದ ಕಾರಿನಲ್ಲಿ ಕುಟ್ಟಕ್ಕೆ ವಾಪಸಾಗಿರುವುದು ಪತ್ತೆಯಾಗಿದೆ.

ಕುಟ್ಟ ವಿಭಾಗದ ಗ್ರಾಮ ಲೆಕ್ಕಾಧಿಕಾರಿ ಪೂಣಚ್ಚ ಅವರು ಕುಟ್ಟ ಠಾಣೆಗೆ ಲಿಖಿತ ದೂರು ನೀಡಿದ್ದು, ವೃತ್ತ ನಿರೀಕ್ಷಕ ಪರಶಿವಮೂರ್ತಿ ಅವರು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶದನ್ವಯ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ನಿರ್ದೇಶನದಂತೆ ಮೊಕದ್ದಮೆ ದಾಖಲಿಸಿದ್ದಾರೆ.