ಸಿದ್ದಾಪುರ, ಮೇ ೩: ಸೋಮವಾರದಂದು ಸುರಿದ ಧಾರಾಕಾರ ಮಳೆಯಿಂದಾಗಿ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಜಖಂ ಗೊಂಡಿರುವ ಘಟನೆ ವಾಲ್ನೂರ್ ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ. ಅಭ್ಯತ್‌ಮಂಗಲ ಗ್ರಾಮದ ಜ್ಯೋತಿನಗರದ ನಿವಾಸಿ ಅನಿಲ್ ಎಂಬವರು ತಮ್ಮ ಸಹೋದ್ಯೋಗಿಗಳೊಂದಿಗೆ ಕೂಲಿ ಕೆಲಸಕ್ಕೆ ಕಾರಿನಲ್ಲಿ ತೆರಳಿದ್ದರು. ಕೆಲಸಕ್ಕೆ ತೆರಳಿದ ಸಂದರ್ಭ ಕೆಲಸ ಮಾಡುವ ಜಾಗದಿಂದ ಅನತಿ ದೂರದಲ್ಲಿ ಕಾರನ್ನು ನಿಲ್ಲಿಸಿದ್ದರು. ಸಂಜೆ ಸುರಿದ ಧಾರಾಕಾರ ಗಾಳಿ ಮಳೆಯಿಂದಾಗಿ ಬೃಹತ್ ಗಾತ್ರದ ಮರವೊಂದು ಬುಡಮೇಲಾಗಿ ಕಾರಿನ ಮೇಲೆ ಬಿದ್ದ ಪರಿಣಾಮ ಅನಿಲ್ ಅವರಿಗೆ ಸೇರಿದ ಮಾರುತಿ - ೮೦೦ ಕಾರು ಸಂಪೂರ್ಣ ಜಖಂಗೊAಡಿದ್ದು ಅದೃಷ್ಟವಶಾತ್ ಕೆಲಸಕ್ಕೆ ತೆರಳಿದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.