ಚೆಯ್ಯಂಡಾಣೆ, ಮೇ ೩ : ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫಾರಂ ವೀರಾಜಪೇಟೆ ತಾಲೂಕು ಸಮಿತಿ ವತಿಯಿಂದ ರಂಜಾನ್ ಪ್ರಯುಕ್ತ ಬಡ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು. ಸರಳ ಸಮಾರಂಭದ ಸಭಾಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಫತಾಯಿ ಕಡಂಗ ವಹಿಸಿದ್ದರು. ಸಮಿತಿಯ ಕಾರ್ಯದರ್ಶಿ ಅಬ್ದುಲ್ ಮಜೀದ್ ಚೊಕಂಡಹಳ್ಳಿ ಮಾತನಾಡಿ ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫಾರಂ ವೀರಾಜಪೇಟೆ ಸಮಿತಿಯು ಈ ವರ್ಷ ಈ ಕಾರ್ಯ ಆರಂಬಿಸಿದ್ದು ಮೊದಲ ಹಂತದಲ್ಲಿ ರಂಜಾನ್ ಕಿಟ್ ವಿತರಿಸಲು ಸಾಧ್ಯವಾಯಿತು.

ಇನ್ನು ಮುಂದೆ ಸಮುದಾಯಕ್ಕೂ ಹಾಗೂ ಎಲ್ಲ ಜನಾಂಗಕ್ಕೂ ಬೇಕಾದ ಸೌಲಭ್ಯಗಳನ್ನು ಒದಗಿಸಲು ಸದಾ ಸಿದ್ಧರಿದ್ದೇವೆ ಎಂದರು. ಕೊಡಗಿನ ೪೦ ಕ್ಕೂ ಹೆಚ್ಚು ಬಡ ಕುಟುಂಬಕ್ಕೆ ರಂಜಾನ್ ಕಿಟ್ಟನ್ನು ವಿತರಿಸಲಾಯಿತು. ಮುಸ್ತಫಾ ಹುಂಡಿ ಸ್ವಾಗತಿಸಿದರೆ, ರಫೀಕ್ ಸಿ.ಎಚ್. ವಂದಿಸಿದರು. ಕಾರ್ಯಕ್ರಮದಲ್ಲಿ ಅಬ್ಬಾಸ್ ಜೈನಿ,ನಜಿರ್ ಚಾಮಿಯಲ್, ಸೈಫುದ್ದಿನ್ ಚಾಮಿಯಲ್, ಹ್ಯಾರಿಸ್ ಕೊಂಡAಗೇರಿ ಇದ್ದರು. -ಸಿ.ಎ.ಅಶ್ರಫ್ ಚೆಯ್ಯಂಡಾಣೆ