ತುಡುವೆ ಜೇನಿನ ಮಾರಕ ರೋಗ ಥಾಯ್ಸಾಕ್ ಬ್ರೂಡ್ ನಂಜು ರೋಗವು (ಖಿSಃಗಿ) ಪುನಃ ಕಾಣಿಸಿಕೊಳ್ಳುತ್ತಿದೆ ಇದೇ ರೋಗವು ೧೯೯೦ರ ಅವಧಿಯಲ್ಲಿ ಜೇನುಕೃಷಿ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿತ್ತು. ಈ ಕಾಯಿಲೆಯು ಈಗ ಕೊಡಗು ಜಿಲ್ಲೆಯೂ ಒಳಗೊಂಡAತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿ ೨ ತಿಂಗಳ ಹಿಂದೆ ಕಾಣಿಸಿಕೊಂಡ ಈ ರೋಗ, ಈಗ ಎಲ್ಲ ತಾಲೂಕು ಗಳಲ್ಲಿಯೂ ಕಂಡುಬರುತ್ತಿದೆ. ಜೇನು ಕೃಷಿಕರು ತಮ್ಮ ಜೇನು ಕುಟುಂಬಗಳನ್ನು ಸಂರಕ್ಷಿಸಿಕೊಳ್ಳಲು ಅನುವಾಗುವಂತೆ ಈ ಮಾಹಿತಿಯನ್ನು ನೀಡಲಾಗುತ್ತಿದೆ. ಜೇನು ಕೃಷಿಕರು ತಮ್ಮ ಜೇನುಕುಟುಂಬಗಳನ್ನು ನಿಯಮಿತವಾಗಿ ವಾರಕ್ಕೊಮ್ಮೆ ಪರೀಕ್ಷಿಸುತ್ತಿದು, ಈ ಕೆಳಗಿನ ಲಕ್ಷಣಗಳು ಕಂಡುಬAದಲ್ಲಿ ಸೂಕ್ತ ನಿವಾರಣೋಪಾಯಗಳನ್ನು ಕೈಗೊಳ್ಳಬೇಕು.
v ಸತ್ತಿರುವ ಮರಿಹುಳು ಗಳು ಅಡಿ ಹಲಗೆಯ ಮೇಲೆ ಅಥವಾ ಪೆಟ್ಟಿಗೆಯ ಮುಂಭಾಗದಲ್ಲಿ ಕಂಡು ಬರುವುದು.
v ಮರಿಹುಳುಗಳು ಏರಿ ಗಳ ಕಣಗಳ ತಳಭಾಗದಲ್ಲಿ ತಲೆಯನ್ನು ಮೇಲಕ್ಕೆ ಎತ್ತಿ ಕೊಂಡು ಸತ್ತು ಬಿದ್ದಿರು ವುದು.
v ಅಂತಹ ಸತ್ತಿರುವ ಮರಿಹುಳುಗಳನ್ನು ಸೂಜಿಯ ಸಹಾಯದಿಂದ ಹೊರತೆಗೆದು ಹಿಡಿದಾಗ ಅದು ನೀರಿನಿಂದ ತುಂಬಿದ ಚೀಲದಂತೆ ಗೋಚರಿಸುವುದು.
v ಮರಿಗಳು ಮತ್ತು ಕೋಶಗಳು ಏರಿಗಳಲ್ಲಿ ಅಲ್ಲಲ್ಲಿ ಚದುರಿದಂತೆ ಕಂಡುಬರುವುದು.
v ಗೂಡಿನ ಆಹಾರ ಸಂಗ್ರಹಣಾ ಚಟುವಟಿಕೆ ಕಡಿಮೆಯಾಗಿರುವುದು, ನೊಣಗಳು ಹೆಚ್ಚು ಸಿಟ್ಟಿನ ಸ್ವಭಾವವನ್ನು ತೋರುವುದು.
ಈ ಕಾಯಿಲೆಯ ಕೆಲವು ನಿರ್ವಹಣಾ ಕ್ರಮಗಳು ಈ ಕೆಳಗಿನಂತಿವೆ
v ಪ್ರಾರAಭಿಕ ಹಂತದಲ್ಲಿ ರೋಗವನ್ನು ಗುರುತಿಸಿದಲ್ಲಿ, ರಾಣಿಯನ್ನು ಪಂಜರದಲ್ಲಿ ಇರಿಸಿ ಅದೇ ಗೂಡಿನೊಳಗೆ ಇರಿಸಬೇಕು (೧೫ ರಿಂದ ೨೧ ದಿನಗಳ ಕಾಲ).
v ವೈರಾಣು ನಿರೋಧಕ ಔಷಧಿಗಳಾದ ಅಸಿಕ್ಲೋ ವೀರ್ ಮಾತ್ರೆ (೫೦ಟನ್ ಪ್ರತಿ ೧೦೦ಟನ್ ಸಕ್ಕರೆ ಪಾಕದಲ್ಲಿ) ಅಥವಾ ವೈರಜಯ್ಡ್ ದ್ರಾವಣ (೫ಟನ್ ಪ್ರತಿ ೧೦೦ಟನ್ ಸಕ್ಕರೆ ಪಾಕದಲ್ಲಿ) ಬೆರೆಸಿ ವಾರಕ್ಕೊಮ್ಮೆಯಂತೆ ನಾಲ್ಕರಿಂದ ಐದು ವಾರಗಳವರೆಗೆ ಕೊಡಬೇಕು.
v ರೋಗದ ತೀವ್ರತೆ ಶೇಕಡ ಐವತ್ತಕ್ಕೂ ಹೆಚ್ಚಿದ್ದಲ್ಲಿ, ಕುಟುಂಬದ ಎಲ್ಲಾ ಪ್ರೌಢ ನೊಣಗಳನ್ನು ಬೇರೊಂದು (ಚೌಕಟ್ಟುಗಳಿಗೆ ಮೇಣದ ಹಾಳೆಗಳನ್ನು ಅಂಟಿಸಿರುವ) ಪೆಟ್ಟಿಗೆಗೆ ವರ್ಗಾಯಿಸಬೇಕು ಮತ್ತು ಇದರಲ್ಲಿ ಆಹಾರವನ್ನು ಒದಗಿಸಿ ರಾಣಿ ತಡೆ ಗೇಟನ್ನು ಅಳವಡಿಸಬೇಕು. ರೋಗ ಯುಕ್ತ ಮರಿಗಳಿರುವ ಎರಿಗಳನ್ನು ಸುಟ್ಟು ಅಥವಾ ಮಣ್ಣಿನಲ್ಲಿ ಹೂತು ಹಾಕಬೇಕು.
ಈ ಎಲ್ಲ ಪರಿಹಾರೋಪಾಯಗಳಲ್ಲದೆ ಕೆಳಗೆ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದಲ್ಲಿ ರೋಗ ಪ್ರಸರಣವನ್ನು ಕಡಿಮೆ ಮಾಡಬಹುದು.
v ಜೇನು ಕುಟುಂಬಗಳನ್ನು ಕೊಂಡು ತರುವಾಗ ರೋಗ ರಹಿತ ವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
v ಜೇನು ಕುಟುಂಬಗಳು ಯಾವಾಗಲೂ ಸದೃಢವಾಗಿರುವಂತೆ ನೋಡಿಕೊಳ್ಳುವುದು (ಬಲಹೀನ ಕುಟುಂಬಗಳನ್ನು ಒಟ್ಟುಗೂಡಿಸಿ ಅವಶ್ಯವಿದ್ದಾಗ ಕೃತಕವಾಗಿ ಆಹಾರ ಒದಗಿಸುವುದರ ಮುಖಾಂತರ).
v ರೋಗಕ್ಕೆ ತುತ್ತಾದ ಕುಟುಂಬಗಳನ್ನು ಪ್ರತ್ಯೇಕಿಸಿ ಇರಿಸಿಕೊಂಡು ಆನಂತರ ಉಪಚರಿಸಬೇಕು.
v ರೋಗ ಯುಕ್ತ ಕುಟುಂಬದ ಎರಿಗಳನ್ನು ರೋಗರಹಿತ ಕುಟುಂಬಕ್ಕೆ ವರ್ಗಾಯಿಸಬಾರದು.
v ರೋಗದಿಂದ ಪಲಾಯನ ಗೊಂಡ ಕುಟುಂಬಗಳ ಎರಿಗಳು, ರೋಗ ಯುಕ್ತ ಮರಿಗಳನ್ನು ಹೊಂದಿರುವ ಎರಿಗಳನ್ನು ಸುಟ್ಟು ಹಾಕಬೇಕು ಅಥವಾ ಮಣ್ಣಿನಲ್ಲಿ ಹೂತು ಹಾಕಬೇಕು.
v ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಸಂಖ್ಯೆಯ ಕುಟುಂಬಗಳನ್ನು ಇರಿಸಬಾರದು (ಅವುಗಳಿಗೆ ಆಹಾರದ ಲಭ್ಯತೆ ಕಡಿಮೆಯಾಗದಂತೆ).
v ಮಧುವನದಲ್ಲಿ ಸ್ವಚ್ಛತಾ ಕ್ರಮಗಳನ್ನು ಪಾಲಿಸಬೇಕು.
v ಮಧುವನದಲ್ಲಿನ ಯಾವ ಕುಟುಂಬಗಳಲ್ಲಿ ಈ ರೋಗದ ಲಕ್ಷಣ ಕಾಣಿಸಿರುವುದು ಇಲ್ಲವೋ ಅಂತಹ ಕುಟುಂಬಗಳನ್ನು ಗುರುತಿಸಿ ಇಟ್ಟುಕೊಂಡು ಮುಂದಿನ ಪಾಲಾಗುವ ಸಂದರ್ಭದಲ್ಲಿ ಅಂತಹ ಕುಟುಂಬ ಗಳಿಂದ ಹೆಚ್ಚಿನ ಸಂಖ್ಯೆಯ ಮರಿ ಕುಟುಂಬಗಳನ್ನು ಮಾಡಿಕೊಳ್ಳಬೇಕು.
ಈ ರೋಗದ ನಿಯಂತ್ರಣದ ಕುರಿತಾದ ಪ್ರಯೋಗಗಳು ಇನ್ನೂ ನಡೆಯುತ್ತಿದ್ದು ಸದ್ಯದಲ್ಲಿ ಲಭ್ಯವಿರುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿ, ಅಥವಾ ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ ಇಲ್ಲಿಗೆ ಸಂಪರ್ಕಿಸಬಹುದು, ದೂರವಾಣಿ ಸಂಖ್ಯೆ ೯೪೮೦೮೩೮೨೧೦/ ೯೮೮೦೦೭೬೩೮೧.
-ಡಾ. ಆರ್ ಎನ್. ಕೆಂಚರೆಡ್ಡಿ , ಮುಖ್ಯಸ್ಥರು
ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ,
ಶಿವಮೊಗ್ಗ. ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ