ಪೊನ್ನAಪೇಟೆ, ಮೇ ೨: ಜನತಾ ಕರ್ಫ್ಯೂ ಸಮಯದಲ್ಲಿ ಅನಗತ್ಯವಾಗಿ ರಸ್ತೆಗಿಳಿದಿದ್ದ ವಾಹನಗಳಿಗೆ ಪೊನ್ನಂಪೇಟೆ ಠಾಣಾಧಿಕಾರಿ ಡಿ. ಕುಮಾರ್ ದಂಡ ವಿಧಿಸಿ ಮತ್ತೊಮ್ಮೆ ಅನಗತ್ಯವಾಗಿ ರಸ್ತೆಗಿಳಿಯದಂತೆ ಎಚ್ಚರಿಕೆ ನೀಡಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜೀಪ್‌ನಲ್ಲಿ ಸಂಚರಿಸುತ್ತಾ ಧ್ವನಿವರ್ಧಕದ ಮೂಲಕ ಜನ ಗುಂಪುಗೂಡದAತೆ ಹಾಗೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದರು. ಪೊನ್ನಂಪೇಟೆ ಪೊಲೀಸರು ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮವಹಿಸುತ್ತಿರುವ ಪರಿಣಾಮ ಸದ್ಯದ ಮಟ್ಟಿಗೆ ಪೊನ್ನಂಪೇಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಇದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ ಗ್ರಾಮ ಪಂಚಾಯಿತಿ ಕೂಡ ಪೊನ್ನಂಪೇಟೆಯಲ್ಲಿ ಕೊರೊನಾಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಕೃಷ್ಣ ನಗರದಲ್ಲಿ ೧೨ ಮಂದಿಗೆ ಕೊರೊನಾ ಸೋಂಕು ಇದ್ದು, ಇತರ ಬಡಾವಣೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಇದೆ.