ವೀರಾಜಪೇಟೆ, ಮೇ ೨: ಕೊರೊನಾ ಕರ್ಫ್ಯೂ ಮರೆತು ಇಲ್ಲಿನ ಮುಖ್ಯ ರಸ್ತೆ ಹಾಗೂ ಗೋಣಿಕೊಪ್ಪಲು ರಸ್ತೆಯ ಮಾಂಸ ಮಾರುಕಟ್ಟೆ ಬಳಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಪತ್ತೆ ಹಚ್ಚಿ ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬೋಜಪ್ಪ ಅವರು ನಿನ್ನೆ ದಿನ ಬೆಳಿಗ್ಗೆ ೧೨ ಗಂಟೆಯ ಸಮಯದಲ್ಲಿ ಸುಮಾರು ೨೦ಕ್ಕೂ ಅಧಿಕವಾಹನಕ್ಕೆ ದಂಡ ವಿಧಿಸಿ ವಾಹನ ಸಂಚಾರವನ್ನು ನಿಯಂತ್ರಣಕ್ಕೆ ತಂದರು.

ನಿನ್ನೆ ದಿನ ಬೆಳಿಗ್ಗೆಯಿಂದಲೇ ಮುಖ್ಯ ರಸ್ತೆ, ಗೋಣಿಕೊಪ್ಪ ರಸ್ತೆಯಲ್ಲಿ ಜನ ಸಂಚಾರ ಅಧಿಕವಿದ್ದು ಗೋಣಿಕೊಪ್ಪ ರಸ್ತೆಯಲ್ಲಿ ಅನಾವಶ್ಯಕವಾಗಿ ನಾಲ್ಕೆöÊದು ಮಂದಿಯ ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಜನರನ್ನು ನಿಯಂತ್ರಿಸಬೇಕಾಯಿತು.

ವೀರಾಜಪೇಟೆಯಲ್ಲಿ ಇಂದು ಭಾನುವಾರ ದಿನ ಬೆಳಿಗ್ಗೆ ೬ಗಂಟೆಯಿAದ ೧೦ ಗಂಟೆಯವರೆಗೆ ತೆರದಿದ್ದ ಮಾಂಸ, ಕೋಳಿ ಅಂಗಡಿಗಳಲ್ಲಿ ಜನರು ಮುಗಿಬಿದ್ದು ಮಾಂಸವನ್ನು ಖರೀದಿಸಿದರು. ಕೆಲವು ಅಂಗಡಿಗಳ ಮುಂದೆ ಸರದಿಯೂ ಕಂಡು ಬಂತು. ಇಲ್ಲಿನ ಗೋಣಿಕೊಪ್ಪ ರಸ್ತೆಯಲ್ಲಿ ೧೦ ಗಂಟೆಯ ನಂತರವೂ ತೆರೆದಿದ್ದ ಅಗತ್ಯ ಸೇವಾ ಅಂಗಡಿಗಳನ್ನು ಪೊಲೀಸರು ಬಲತ್ಕಾರವಾಗಿ ಮುಚ್ಚಿಸಿದರು. ಬೆಳಿಗ್ಗೆ ೧೦ ಗಂಟೆಯ ನಂತರ ಪೊಲೀಸ್ ಬಂದೋಬಸ್ತ್ ವಾಹನಗಳನ್ನು ಹೊರತುಪಡಿಸಿದರೆ ಇನ್ನಿತರ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶವಿರಲಿಲ್ಲ. ಹಾಗೂ ಸಾರಿಗೆ ಸಂಸ್ಥೆ ಬಸ್ಸು ನಿಲ್ದಾಣ ಬಿಕೋ ಎನ್ನುತ್ತಿದ್ದವು.

ಸಂತೆ ರದ್ದು

ತಾ. ೫ರಂದು ಸಂತೆಯನ್ನು ಈ ವಾರವೂ ರದ್ದು ಪಡಿಸಲಾಗಿದೆ. ವೀರಾಜಪೇಟೆ ಖಾಸಗಿ ಬಸ್ಸು ನಿಲ್ದಾಣದ ಬಳಿಯಿರುವ ನಿತ್ಯ ಸಂತೆ ವ್ಯಾಪಾರವನ್ನು ತಾ. ೧೨ರವರೆಗೆ ರದ್ದು ಪಡಿಸಲಾಗಿದೆ ಎಂದು ಮುಖ್ಯಾಧಿಕಾರಿ ಎನ್.ಪಿ.ಹೇಮ್ ಕುಮಾರ್ ತಿಳಿಸಿದ್ದಾರೆ.