ಪೊನ್ನಂಪೇಟೆ, ಮೇ ೨: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನತಾ ಕರ್ಫ್ಯೂ ಸಮಯದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಯಲ್ಲಿ ಒಡಾಡುತ್ತಿದ್ದ ೭ ಬೈಕ್ ಹಾಗೂ ೭ ಕಾರುಗಳನ್ನು ಶ್ರೀಮಂಗಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಕುಟ್ಟ ಸಿಪಿಐ ಪರಶಿವ ಮೂರ್ತಿ, ಶ್ರೀಮಂಗಲ ಪಿಎಸ್‌ಐ ರವಿಶಂಕರ್ ಮತ್ತು ಸಿಬ್ಬಂದಿಗಳಿದ್ದರು. ಇದೇ ರೀತಿಯ ಕಾರ್ಯಾಚರಣೆ ಪ್ರತಿದಿನ ಮುಂದುವರೆಯಲಿದ್ದು, ಸಾರ್ವಜನಿಕರು ಅನಗತ್ಯ ಓಡಾಟ ಮಾಡದಂತೆ ತಿಳಿಸಿದ್ದಾರೆ.