(ಚಿತ್ರ ವರದಿ: ಕುಯ್ಯಮುಡಿ ಸುನಿಲ್)
ಭಾಗಮಂಡಲ, ಮೇ. ೨ :ಕಳೆದ ಬಾರಿಯ ಮಳೆಗಾಲದಲ್ಲಿ ಅತಿವೃಷ್ಟಿಯಿಂದಾಗಿ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ಸಾವು-ನೋವು ಸಂಭವಿಸಿದ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಮಳೆಗಾಲ ಸಮೀಪಿಸುತ್ತಲಿದೆ. ಆ ದುರ್ಘಟನೆಗೆ ಕಾರಣವಾಗಿದ್ದ ಗಜಗಿರಿ ಬೆಟ್ಟದಲ್ಲಿನ ಹಾಗೂ ಸನಿಹದ ಬ್ರಹ್ಮಗಿರಿ ಬೆಟ್ಟಗಳಲ್ಲಿ ಕೊರೆಯಲಾಗಿದ್ದ ಇಂಗುಗುAಡಿಗಳನ್ನು ಅರಣ್ಯ ಇಲಾಖೆ ಇದೀಗ ಮುಚ್ಚಿದೆ. ಸುಮಾರು ೬೫೦ ಇಂಗುಗುAಡಿಗಳನ್ನು ಸ್ಥಳೀಯರ ಸಹಕಾರ ಪಡೆದು ಇಲಾಖಾ ಸಿಬ್ಬಂದಿ ಮುಚ್ಚಿದ್ದಾರೆ. ಕಳೆದ ಬಾರಿಯ ಮಳೆಗಾಲದಲ್ಲಿ ಅತಿವೃಷ್ಟಿಯಿಂದಾಗಿ ಬೆಟ್ಟ ಕುಸಿದು ಎರಡು ಮನೆÀಗಳು ನೆಲಸಮವಾಗಿದ್ದವು. ತಲಕಾವೇರಿ ಕ್ಷೇತ್ರದ ಗಜಗಿರಿ ಬೆಟ್ಟ ಕುಸಿದು ಬೆಟ್ಟದ ತಪ್ಪಲಿನಲ್ಲಿದ್ದ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣಾಚಾರ್, ಪತ್ನಿ, ಸಹೋದರ ಹಾಗೂ ಇನ್ನಿಬ್ಬರು ಅರ್ಚಕರು ಸಾವನ್ನಪ್ಪಿದ್ದರು. ಈ ಮನೆಗಳು ಕೊಚ್ಚಿಹೋಗಲು ಮೇÀಲ್ಭಾಗದ ಗಜಗಿರಿ ಬೆಟ್ಟದಲ್ಲಿ ಕೊರೆÀಯಲಾಗಿದ್ದ ಮೂರು ಇಂಗುಗುAಡಿಗಳು ಕಾರಣವಾಗಿವೆ. ಗುಂಡಿಗಳಲ್ಲಿ ನೀರು ನಿಂತು ಹೆಚ್ಚಿದÀ ತೇವಾಂಶ ಹಾಗೂ ಹಿಟಾಚಿ ಯಂತ್ರÀಗಳನ್ನು ಬಳಸಿ ಕೊರೆಯಲಾಗಿದ್ದ ಕಾರ್ಯದಿಂದಾÀಗಿ ಬೆಟ್ಟ ಪ್ರದೇಶ ಮೂಲ ಸ್ವರೂಪವನ್ನು ಕಳೆದುಕೊಂಡು ಮಣ್ಣು ಸಡಿಲಗೊಂಡಿತ್ತು. ಈ ಘಟನೆ ಕುರಿತಾದ ಕಾರಣ ಕಂಡುಹಿಡಿಯಲು ಜಿಲ್ಲೆಗೆ ಆಗಮಿಸಿದ್ದ ತಜ್ಞರ ಸಮಿತಿ ಸ್ಥಳ ಪರಿಶೀಲನೆ ಬಳಿಕ ವರದಿ ನೀಡಿತ್ತು. ‘ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯ’ (ಜಿ.ಎಸ್.ಐ) ಭೂವಿಜ್ಞಾನಿಗಳು ತಮ್ಮ ವರದಿಯಲ್ಲಿ ಬೆಟ್ಟದ ಮೇಲೆ ಅವೈಜ್ಞಾನಿಕವಾಗಿ ಇಂಗುಗುAಡಿಗಳನ್ನು ನಿರ್ಮಿಸಿರುವದರಿಂದ ಬೆಟ್ಟ ಕುಸಿತಕ್ಕೆ ಕಾರಣವಾಗಿದೆ ಎಂದು ಖಚಿತಪಡಿಸಿದ್ದರು. ಅಲ್ಲದೆ, ಬೆಟ್ಟದ ಮೇಲೆ ಅರಣ್ಯ ಇಲಾಖೆ ವತಿಯಿಂದ ನಿರ್ಮಿಸಲಾಗಿದ್ದ ಇಂಗುಗುAಡಿಗಳು ಅಪಾಯಕಾರಿಯಾಗಿದ್ದು, ಮಳೆಗಾಲದ ಒಳಗಡೆ ಅವುಗಳನ್ನು ಮುಚ್ಚದಿದ್ದಲ್ಲಿ ಮುಂದೆಯೂ ಅಪಾಯ ತಪ್ಪಿದ್ದಲ್ಲ ಎನ್ನುವ ಕುರಿತು “ಶಕ್ತಿ” ಹಾಗೂ ಇನ್ನಿತರ ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. “ಶಕ್ತಿ”ಯ ಸಂಪಾದಕೀಯದಲ್ಲಿಯೂ ಈ ಬಗ್ಗೆ ಒತ್ತಾಯಿಸಲಾಗಿತ್ತು. ಇಂಗುಗುAಡಿಗಳನ್ನು ಮುಚ್ಚುವಂತೆ ಅಂದಿನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದರು. “ಶಕ್ತಿ” ಗೆ ತಿಳಿದುಬಂದ ಮಾಹಿತಿ ಪ್ರಕಾರ ಕೆಲವು ಎನ್ ಜಿ ಒ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸgಕಾರೀ ಮೇಲ್ಮಟ್ಟದಲ್ಲಿ ಒತ್ತಾಯ ಹೇರಿ ಈ ಇಂಗುಗುAಡಿಗಳನ್ನು ತೆಗೆಸಲಾಗಿತ್ತು. ಇದರಿಂದ ಮಳೆ ನೀರು ಸಂರಕ್ಷಣೆಯಾಗುತ್ತದೆ ಎಂದು ವಾದಿಸಿ ಸರಕಾರೀ ಅಧಿಕಾರಿಗಳನ್ನು, ಸಚಿವರುಗಳನ್ನು ಒಪ್ಪಿಸಿ ಈ ಕಾರ್ಯ ಮಾಡಿಸಿದ್ದರು. ಅರಣ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳೂ ಅನಿವಾರ್ಯವಾಗಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಈ ಕೆಲಸ ನಿರ್ವಹಿಸಿದ್ದರು. ಆಗ ಭಾಗಮಂಡಲದ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದರೂ ಅದನ್ನು ಪರಿಗಣಿಸದೆ ಹಿಟಾಚಿ ಯಂತ್ರ ಬಳಸಿ ಬೆಟ್ಟದ ಮೇಲೆ ಕೆಲಸ ಮಾಡಿ ಬೆಟ್ಟ ಪ್ರದೇಶವೂ ಬಲಹೀನಗೊಳ್ಳಲು, ಬಳಿಕ ಬೆಟ್ಟವೇ ಕುಸಿದು ಬೀಳಲು ಮೂಲ ಕಾರಣವಾಗಿತ್ತು. ಪರಿಣಿತರ ವರದಿಯೂ ಇದನ್ನು ದೃಢಪಡಿಸಿದೆ.
ಈ ದುರ್ಘಟನೆ ಸಂದರ್ಭ ತಲಕಾವೇರಿ ಕ್ಷೇತ್ರಕ್ಕೆ ನೀರು ಒದಗಿಸಲು ನಿರ್ಮಿಸಲಾಗಿದ್ದ ಕೊಳವೆ ಬಾವಿ ಕೂಡ ಕೊಚ್ಚಿಹೋಗಿದೆ. ತಲಕಾವೇರಿಯಲ್ಲಿ ಕುಂಡಿಕೆ, ಕೊಳ ಇದ್ದರೂ ಅಲ್ಲಿ ನಿತ್ಯ ಬಳಕೆಗಾಗಿ ಕೆಳಭಾಗದಿಂದ ನೀರು ಸರಬರಾಜು ಮಾಡಲಾಗುತ್ತಿತ್ತು.
(ಮೊದಲ ಪುಟದಿಂದ) ದಿ.ನಾರಾಯಣಾಚಾರ್ ಮನೆಯ ಸಮೀಪದಲ್ಲೇ ಈ ಕೊಳವೆ ಬಾವಿ ಇದ್ದಿತು. ಅದಕ್ಕೆ ಮೋಟಾರ್ ಅಳವಡಿಸಿ ನೀರು ಸರಬರಾಜು ಮಾಡ ಲಾಗುತ್ತಿತ್ತು. ಶೌಚಾಲಯಕ್ಕೆ, ಕ್ಷೇತ್ರದ ಬಳಿ ಸ್ವಚ್ಛ ಮಾಡಲು, ಇನ್ನಿತರ ಉದ್ದೇಶಕ್ಕಾಗಿ ಈ ನೀರು ಬಳಕೆ ಯಾಗುತ್ತಿತ್ತು. ಇದೀಗ ಬೆಟ್ಟದೊಂದಿಗೆ ನೀರಿನ ಮೂಲವೂ ಕೊಚ್ಚಿಹೋಗಿದೆ. ಸದ್ಯಕ್ಕೆ ಕ್ಷೇತ್ರದ ಬಳಿಯಿರುವ ಈ ಹಿಂದೆ ಬಳಸ ಲಾಗುತ್ತಿದ್ದ ಹಳೆಯ ಬಾವಿ ಯಿಂದ ನೀರು ಬಳಸಿಕೊಳ್ಳಲಾಗುತ್ತಿದೆ.
೬೫೦ ಗುಂಡಿಗಳು
ತಲಕಾವೇರಿಯ ಗಜಗಿರಿ ಹಾಗೂ ಬ್ರಹ್ಮಗಿರಿ ಬೆಟ್ಟಗಳಲ್ಲಿ ಅಂದಾಜು ೬೫೦ ರಷ್ಟು ಇಂಗುಗುAಡಿಗಳಿದ್ದವುೆ. ೨೦೧೪-೧೫ರಲ್ಲಿ ಈ ಗುಂಡಿಗಳನ್ನು ಕೊರೆಯಲಾಗಿತ್ತು. ಒಂದೊAದು ಗುಂಡಿಗಳು ಸುಮಾರು ಐದು ಮೀಟರ್ ಉದ್ದ ಹಾಗೂ ಒಂದು ಮೀಟರ್ನಷ್ಟು ಆಳವಿದ್ದವು. ಅಂದರೆ ಸಾಮಾನ್ಯ ಗುಂಡಿ ಗಿಂತ ದುಪ್ಪಟ್ಟು ಅಳತೆಯದ್ದಾಗಿತ್ತು.
ತಜ್ಞರ ವರದಿ ಬಂದ ಬಳಿಕ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಇಂಗುಗುAಡಿಗಳನ್ನು ಮುಚ್ಚುವಂತೆ ಅರಣ್ಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಸಂಬAಧ ಅಧಿಕಾರಿಗಳು ಗುಂಡಿ ಮುಚ್ಚಲು ಅನುಮತಿ ಕೋರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಅನುಮತಿ ಇತ್ತೀಚೆಗೆ ದೊರೆತಿದ್ದು ಕಳೆದ ೨೬ ದಿನಗಳ ಕಾಲ ನಿರಂತರ ಪ್ರಯತ್ನಪಟ್ಟು ಇದೀಗ ಎಲ್ಲ ಗುಂಡಿಗಳನ್ನು ಮುಚ್ಚಲಾಗಿದೆ. ಸ್ಥಳೀಯರು ಕೂಡ ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.. ಬೆಟ್ಟದ ಮೇಲೆ ಗುಂಡಿ ತೆಗೆಯಲಾಗಿರುವ ಮಣ್ಣನ್ನೇ ಬಳಸಿ ಮುಚ್ಚಲಾಗಿದೆ. ಈ ನಡುವೆ ಈ ಬೆಟ್ಟಗಳಲ್ಲಿ ಪ್ರಶಸ್ತವಾಗುವಂತಹ ನೇರಳೆ, ಅಮೆ, ಸೀಬೆ, ನೆಲ್ಲಿಕಾಯಿ ಇತ್ಯಾದಿ ಮರಗಳನ್ನು ಬೆಳೆಸಲು ಈಗಾಗಲೇ ಅರಣ್ಯ ಇಲಾಖಾಧಿ ಕಾರಿಗಳು ಸಂಪಾಜೆಯಿAದ ಸುಮಾರು ೫೦ ಸಾವಿರ ಗಿಡಗಳನ್ನು ಖರೀದಿಸಿದ್ದಾರೆ. ಅಲ್ಲದೆ ಅಮೆ ಮರದ ಬೀಜಗಳನ್ನು ಈಗಾಗಲೇ ಬಿತ್ತಲಾಗಿದೆ. ಬಳಿಕ ಒಂದು ಅಡಿ ಅಂತರದಲ್ಲಿ ವೆಟಿವರ್ ಹುಲ್ಲನ್ನು ಬೆಳಸಲಾಗುತ್ತದೆ. ಈ ಹುಲ್ಲು ನೆಲದಲ್ಲಿ ಗಟ್ಟಿಯಾಗಿ ಬೇರೂರಿ ಮಣ್ಣು ಕುಸಿತವನ್ನು ತಡೆಯುವಂತಹ ಶಕ್ತಿಯುಳ್ಳದ್ದಾಗಿದೆ.