ಕಾಯಪಂಡ ಶಶಿ
ಮಡಿಕೇರಿ, ಏ. ೨೯: ಸೇನಾ ಜಿಲ್ಲೆ ಎಂಬ ಖ್ಯಾತಿಯೊಂದಿಗೆ ಲ್ಯಾಂಡ್ ಆಫ್ ಜನರಲ್ಸ್ ಎಂಬ ವಿಶಿಷ್ಟ ಹೆಗ್ಗಳಿಕೆಯನ್ನೂ ಹೊಂದಿರುವ ಕೊಡಗಿನ ಪಾಲಿಗೆ ಮತ್ತೊಂದು ಹಿರಿಮೆ ಸಂದಿದೆ. ಭಾರತೀಯ ಸೇನೆಯಲ್ಲಿ ಪ್ರಪ್ರಥಮ ಮಹಾದಂಡನಾಯಕ (ಕಮಾಂಡರ್ ಇನ್ ಚೀಫ್)ರಾಗಿದ್ದ ಫೀ.ಮಾ. ಕೆ.ಎಂ. ಕಾರ್ಯಪ್ಪ ಪದ್ಮಭೂಷಣ ಜನರಲ್ ತಿಮ್ಮಯ್ಯ ಅವರುಗಳು ಎಂದಿಗೂ ಸೇನಾಧ್ರುವತಾರೆಗಳು. ಇವರ ಸೇವೆಯ ಬಳಿಕ ಈ ತನಕ ೯ ಮಂದಿ ಲೆಫ್ಟಿನೆಂಟ್ ಜನರಲ್‌ಗಳಾಗಿ ಸೇನೆಯಲ್ಲಿ ಜವಾಬ್ದಾರಿ ನಿಭಾಯಿಸಿದ್ದಾರೆ. ಇವರಲ್ಲಿ ಪ್ರಸ್ತುತ ಇಬ್ಬರು ಸೇವೆಯಲ್ಲಿದ್ದಾರೆ.
ಇದೀಗ ಲೆ.ಜ. ಆಗಿರುವ ಕೋದಂಡ ಕಾರ್ಯಪ್ಪ ಹಾಗೂ ಚೆನ್ನೀರ ಬನ್ಸಿ ಪೊನ್ನಪ್ಪ ರಕ್ಷಣಾ ಪಡೆಯಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇದೀಗ ಇತ್ತೀಚೆಗೆ ಸೇನೆಯಲ್ಲಿ ಹೊಸದಾಗಿ ಮಾಸ್ಟರ್ ಜನರಲ್ ಸಸ್ಟೆನೆನ್ಸ್ (ಎಂಎಸ್‌ಜಿ) ಎಂಬ ಹುದ್ದೆಯನ್ನು ಸೃಷ್ಟಿಸಲಾಗಿದ್ದು, ಈ ಸ್ಥಾನದ ಪ್ರಥಮ ಅಧಿಕಾರಿಯಾಗಿ ಲೆ|| ಜ|| ಕೋದಂಡ ಕಾರ್ಯಪ್ಪ ಅವರು ನಿಯುಕ್ತಿಗೊಂಡಿರುವದು ಕೊಡಗಿಗೆ ಮತ್ತೊಂದು ಹಿರಿಮೆಯಾಗಿದೆ.
ಮಥುರಾದಲ್ಲಿ ೧ ಕೋರ್ ಕಮಾಂಡರ್ ಆಗಿದ್ದ ಕಾರ್ಯಪ್ಪ ಅವರು ಇದೀಗ ಮಾಸ್ಟರ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಯುದ್ಧ ಸಾಮಗ್ರಿ, ಸಮವಸ್ತç, ಸಾಮಾನ್ಯ ಮಳಿಗೆಗಳು, ಯುದ್ಧನೌಕೆ ಉಪಕರಣಗಳ ವಿಷಯದಲ್ಲಿ ಭಾರತೀಯ ಸೇನೆಯನ್ನು ನಿಭಾಯಿಸುವ ಜವಾಬ್ದಾರಿ ಎಂ.ಜಿ.ಎಸ್‌ಗಳಿಗೆ ಇದ್ದು, ಈ ಜವಾಬ್ದಾರಿಯನ್ನು ಕಾರ್ಯಪ್ಪ ಅವರು ವಹಿಸಿದ್ದಾರೆ. ಎಂ.ಜಿ.ಎಸ್. ಶಾಖೆಯು ಭಾರತೀಯ ಸೇನೆಯ ಸಂಪೂರ್ಣ ಆದಾಯ ಸಂಗ್ರಹಣೆಯನ್ನು ನಿರ್ವಹಿಸುತ್ತಿದೆ ಎಂದು ಸೇನೆಯ ಅಧಿಕಾರಿಗಳು ಹೇಳಿದ್ದಾರೆ. ಎಂ.ಜಿ.ಎಸ್. ಹುದ್ದೆಯನ್ನು ಇತ್ತೀಚೆಗಷ್ಟೆ ರಚಿಸಲಾಗಿದೆ. ಇದನ್ನು ಈ ಮೊದಲು ಮಾಸ್ಟರ್ ಜನರಲ್ ಆರ್ಡಿನೆನ್ಸ್ ಎಂದು ಕರೆಯಲಾಗುತ್ತಿತ್ತು. ಇದೀಗ ಸುಧಾರಣೆಗಳ ಭಾಗವಾಗಿ ಪುನರ್‌ರಚಿಸಲಾಗಿದೆ.
ಇಬ್ಬರು ಕಮಾಂಡರ್‌ಗಳು
ಈ ಹಿಂದೆ ಲೆ|| ಜ|| ಸಿ. ನಂದ ಅವರು ಆರ್ಮಿಕಮಾಂಡರ್ (ಉoಛಿiಛಿ) ಆಗಿದ್ದು, ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರುಗಳ ನಂತರ ಉನ್ನತ ಜವಾಬ್ದಾರಿಯನ್ನು ಇವರು ನಿಭಾಯಿಸಿದ್ದಾರೆ. ಇವರ ನಂತರದಲ್ಲಿ ಲೆ|| ಜ|| ಪಟ್ಟಚೆರವಂಡ ಸಿ. ತಿಮ್ಮಯ್ಯ ಅವರು ಬರುತ್ತಾರೆ. ಇವರು ಆರ್ಮಿಕಮಾಂಡರ್ (ಟ್ರೆöÊನಿಂಗ್) ಆಗಿ ಶಿಮ್ಲಾದಲ್ಲಿ ಕಾರ್ಯನಿರ್ವಹಿಸಿದ್ದು, ಇವರಿಬ್ಬರು ಆರ್ಮಿ ಕಮಾಂಡರ್‌ಗಳೆAದು ಗುರುತಿಸಲ್ಪಟ್ಟಿದ್ದಾರೆ.
ಇವರುಗಳ ನಂತರದಲ್ಲಿ ಕೋರ್ ಕಮಾಂಡರ್‌ಗಳು ಎಂದು ಬರಲಿದ್ದು, ಕೋದಂಡ ಕಾರ್ಯಪ್ಪ ಅವರು ೧ ಕೋರ್ ಕಮಾಂಡರ್, ಮಥುರಾ ಹಾಗೂ ಚೆನ್ನೀರ ಬನ್ಸಿ ಪೊನ್ನಪ್ಪ ೧೧ ಕೋರ್ ಕಮಾಂಡರ್, ಜಲಂಧರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಕಾರ್ಯಪ್ಪ ಅವರು ಎಂಎಸ್‌ಜಿ ಅಧಿಕಾರಿಯಾಗಿದ್ದರೆ, ಬನ್ಸಿ ಪೊನ್ನಪ್ಪ ಅವರು ಅದೇ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ.