ನಾಪೋಕ್ಲು, ಏ. ೩೦: ಕೊರೊನಾ ಎರಡನೆ ಅಲೆ ಹಿನ್ನೆಲೆಯಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಭಗವತಿ ದೇವಾಲಯ, ಚರ್ಚ್, ಮುತ್ತಪ್ಪ ದೇವಾಲಯ ಮತ್ತು ಮಸೀದಿಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು.

ನಾಪೋಕ್ಲು ಹಳೆ ತಾಲೂಕಿನ ಭಗವತಿ ದೇವಾಲಯ ಮತ್ತು ಶ್ರೀ ಪೊನ್ನು ಮುತ್ತಪ್ಪ ದೇವಾಲಯ, ಸಂತ ಮೇರಿ ಚರ್ಚ್ ಮತ್ತು ನಗರದ ಮಸೀದಿಗಳಿಗೆ ಪಂಚಾಯಿತಿ ಖರ್ಚಿನಿಂದ ಈ ಕಾರ್ಯ ಕೈಗೊಂಡಿದ್ದು ಮುಂದೆ ನಗರದಾದ್ಯಂತ ಸ್ಯಾನಿಟೈಸರ್ ಸಿಂಪಡಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ತಿಳಿಸಿದ್ದಾರೆ.