ಮಡಿಕೇರಿ, ಏ. ೩೦: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ವತಿಯಿಂದ ಕೊಡವ/ಕೊಡವ ಭಾಷಿಕರ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.

ಸ್ಪರ್ಧೆಗೆ ಯಾವುದೇ ವಯಸ್ಸಿನ ನಿರ್ಬಂಧ ಇರುವುದಿಲ್ಲ. ಎ೩ ಅಳತೆಯ ಡ್ರಾಯಿಂಗ್ ಶೀಟ್‌ನಲ್ಲಿ ಚಿತ್ರಬಿಡಿಸಿ ಮನೆಯಿಂದಲೇ ಚಿತ್ರಬರೆದು ಕಳುಹಿಸಬಹುದು. ಕೊಡವ/ಕೊಡವ ಭಾಷಿಕರ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರವನ್ನು ಕಳುಹಿಸಿಕೊಡಬೇಕು. ಬೇರೆ ಹಾಳೆಯಲ್ಲಿ ತಮ್ಮ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿ ಮೇ ೧೦ ರೊಳಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿ, ಸ್ಕೌಟ್ಸ್ ಭವನ ಕಟ್ಟಡ, ಮಡಿಕೇರಿ ಇಲ್ಲಿಗೆ ಅಂಚೆ ಮೂಲಕ ಕಳುಹಿಸಬೇಕು. ಅತ್ಯುತ್ತಮ ಚಿತ್ರಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.