ಕರಿಕೆ, ಏ. ೨೯: ಕೋವಿಡ್ ೧೯ ಹಿನ್ನೆಲೆಯಲ್ಲಿ ೨೦೨೦-೨೧ನೇ ಸಾಲಿನಲ್ಲಿ ಶಾಲೆಗಳು ತೆರೆಯದೆ ಇರುವುದರಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ (ಐಟಿಡಿಪಿ)ಯಿಂದ ಆಶ್ರಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ೫೦ ಕೆ.ಜಿ. ಅಕ್ಕಿ, ೨೫ ಕೆ.ಜಿ ಗೋಧಿ, ೧೦ ಕೆ.ಜಿ. ತೊಗರಿಬೇಳೆ ಪ್ರತಿ ವಿದ್ಯಾರ್ಥಿಗೆ ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಪನಾ ಜಗದೀಶ್, ಶಾಲಾ ಪೋಷಕರ ಸಮಿತಿ ಅಧ್ಯಕ್ಷ ಹುಲಿಮನೆ ಜಯಾನಂದ, ಸ.ಹಿ.ಪ್ರಾ. ಶಾಲಾ ಶಿಕ್ಷಕಿ ಮಹಾಲಕ್ಷಿö್ಮ, ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಬರಮಪ್ಪ ಪಾಶಗಾರ ಹಾಗೂ ಸಿಬ್ಬಂದಿ ಸುಮಿತ್ರಾ ಉಪಸ್ಥಿತರಿದ್ದರು.