ಮಡಿಕೇರಿ, ಏ. ೨೯: ಕೊಡವಾಮೆರ ಕೊಂಡಾಟ ಸಂಘಟನೆಯ ವತಿಯಿಂದ ಇತ್ತೀಚೆಗೆ ನಿಧನರಾದ ಕೊಡವ ಗಾನಕೋಗಿಲೆ ತೋಲಂಡ ಪ್ರಭಾಚಂಗಪ್ಪ ಅವರಿಗೆ ಸ್ವರ ನಮನ ಅರ್ಪಿಸಲಾಯಿತು. ಸದಸ್ಯೆ ಪೋಡಮಾಡ ಭವಾನಿ ನಾಣಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಪ್ರಾಯೋಜಕತ್ವದಲ್ಲಿ ನಡೆದ, ಪ್ರಭಾನಾಣಯ್ಯ ಅವರು ಹಾಡಿದ ಕೊಡವ ಹಾಡುಗಳ, ಸ್ಪರ್ಧೆ ಏರ್ಪಡಿಸಲಾಗಿತ್ತು.
ಮೇವಡ ಕಾವೇರಿ ಸೋಮಯ್ಯ ಪ್ರಥಮ, ಬಟ್ಟಿಯಂಡ ಲಿಖಿತ ದ್ವಿತೀಯ, ಚೌರಿರ ಸ್ವಾತಿರಮೇಶ್ ತೃತೀಯ ಸ್ಥಾನ ಗಳಿಸಿದರು. ತೀರ್ಪುಗಾರರಾಗಿ ಚೇಂದಿರ ನಿರ್ಮಲಬೋಪಣ್ಣ, ಮಾಳೇಟಿರ ಅಜಿತ್ ಪೂವಣ್ಣ, ಕುಲ್ಲಚಂಡ ವಿನುತ ಕೇಸರಿ ಅವರು ಕಾರ್ಯನಿರ್ವಹಿಸಿದರೆ, ಸ್ಫರ್ದೆಯಲ್ಲಿ ಚೆನಿಯಪಂಡ ಮನು ಮಂದಣ್ಣ, ಮುಕ್ಕಾಟಿರ ಮೌನಿ ಕಾವೆರಮ್ಮ, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಬಲ್ಯಂಡ ಕ್ಷೀರ, ಬಲ್ಯಮೀದೇರಿರ ರೀತು ಸತೀಶ್, ಚೆಟ್ರಂಡ ವಸಂತಿ ಪೂಣಚ್ಚ, ಮಾಚಪಂಡ ತುಳಸಿ ಕುಶಾಲಪ್ಪ, ಕುಪ್ಪುಡಿರ ನೀರಜ್, ಬೂವಕಂಡ ಪ್ರೇಮಿ ಸುರೇಶ್, ನೂರೆರ ಸರಿತ ಉತ್ತಯ್ಯ, ಚೊಟ್ಟಂಡ ತಶ್ವಿ ಸೋಮಯ್ಯ, ಚೌರಿರ ಸ್ವಾತಿರಮೇಶ್, ಚೋಕಿರ ಯಾನ ಸಜಿತ್, ಬಟ್ಟಿಯಂಡ ಲಿಖಿತ, ಬಾಚಂಗಡ ಕೀರ್ತನ್ ಕರುಂಬಯ್ಯ, ತಾಪಂಡ ಹರ್ಷಿತ್ ಪೊನ್ನಪ್ಪ, ಅಯ್ಯಲಪ್ಪಂಡ ಪಟ್ಟುಪೆಮ್ಮಯ್ಯ, ಡಾ. ನಿಡುಮಂಡ ಶೋಭ, ಮೇವಡ ಕಾವೇರಿ ಸೋಮಯ್ಯ, ಚಂಗಚAಡ ರಶ್ಮಿ, ಚಂಗಚAಡ ಸ್ಮಿತ ಗಂಗಮ್ಮ ಅವರುಗಳು ಭಾಗವಹಿಸಿದ್ದರು.
ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ಬೆಳ್ಯಪ್ಪ ಅವರ ನೇತೃತ್ವದಲ್ಲಿ ನಡೆದ ಸ್ಪರ್ಧೆಯ ಸಂಚಾಲಕರಾಗಿ ಸಣ್ಣುವಂಡ ಕಿಸು ದೇವಯ್ಯ ಅವರು ಕಾರ್ಯನಿರ್ವಹಿಸಿದರು.