ಮಡಿಕೇರಿ, ಏ. ೨೯: ಮಡಿಕೇರಿ ನಗರಸಭೆಗೆ ಈ ಹಿಂದೆ ೨೦೧೩ರಲ್ಲಿ ಚುನಾವಣೆ ನಡೆದಿತ್ತು. ಆ ಸಂದರ್ಭದ ಅಧಿಕಾರಾವಧಿ ೨೦೧೯ರಲ್ಲೇ ಪೂರ್ಣಗೊಂಡಿದ್ದರೂ ಕೆಲವಾರು ಗೊಂದಲಗಳಿAದಾಗಿ ಇದೀಗ ಎರಡು ವರ್ಷ ತಡವಾಗಿ ಚುನಾವಣೆ ನಡೆದಿದ್ದು, ನಗರದ ಜನತೆಯೊಂದಿಗೆ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಕೌತುಕಕ್ಕೆ ತಾ. ೩೦ ರಂದು (ಇಂದು) ಮತ ಎಣಿಕೆಯೊಂದಿಗೆ ತೆರೆ ಬೀಳಲಿದೆ.ಈ ಹಿಂದೆ...೨೦೧೩ರಲ್ಲಿ ಚುನಾವಣೆ ನಡೆದ ಸಂದರ್ಭದಲ್ಲಿ ಒಟ್ಟು ೨೩ ವಾರ್ಡ್ಗಳ ಪೈಕಿ ಕಾಂಗ್ರೆಸ್ ೧೦ (ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಏ. ೨೯: ಮಡಿಕೇರಿ ನಗರಸಭೆಗೆ ಈ ಹಿಂದೆ ೨೦೧೩ರಲ್ಲಿ ಚುನಾವಣೆ ನಡೆದಿತ್ತು. ಆ ಸಂದರ್ಭದ ಅಧಿಕಾರಾವಧಿ ೨೦೧೯ರಲ್ಲೇ ಪೂರ್ಣಗೊಂಡಿದ್ದರೂ ಕೆಲವಾರು ಗೊಂದಲಗಳಿAದಾಗಿ ಇದೀಗ ಎರಡು ವರ್ಷ ತಡವಾಗಿ ಚುನಾವಣೆ ನಡೆದಿದ್ದು, ನಗರದ ಜನತೆಯೊಂದಿಗೆ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಕೌತುಕಕ್ಕೆ ತಾ. ೩೦ ರಂದು (ಇಂದು) ಮತ ಎಣಿಕೆಯೊಂದಿಗೆ ತೆರೆ ಬೀಳಲಿದೆ.

ಈ ಹಿಂದೆ...

೨೦೧೩ರಲ್ಲಿ ಚುನಾವಣೆ ನಡೆದ ಸಂದರ್ಭದಲ್ಲಿ ಒಟ್ಟು ೨೩ ವಾರ್ಡ್ಗಳ ಪೈಕಿ ಕಾಂಗ್ರೆಸ್ ೧೦ ಸಂಬAಧಿಸಿದAತೆ ಬಿಸಿಎಂಎ ಮಹಿಳಾ ಮೀಸಲಾತಿಯಲ್ಲಿ ಅವಕಾಶ ಹೊಂದಿದ್ದ ಶ್ರೀಮತಿ ಬಂಗೇರ ಅವರ ಬೇಡಿಕೆಯೂ ಇದ್ದ ಕಾರಣ ಪಕ್ಷ ಇವರು ಹಾಗೂ ಜುಲೇಕಾಬಿ ಅವರಿಗೆ ತಲಾ ೧೫ ತಿಂಗಳ ಅಧಿಕಾರ ನೀಡುವ ಒಡಂಬಡಿಕೆ ಮೂಲಕ ಇದನ್ನು ಸರಿಪಡಿಸಿತ್ತು. ೧೫ ತಿಂಗಳ ಬಳಿಕ ಸಂಬAಧಿಸಿದAತೆ ಬಿಸಿಎಂಎ ಮಹಿಳಾ ಮೀಸಲಾತಿಯಲ್ಲಿ ಅವಕಾಶ ಹೊಂದಿದ್ದ ಶ್ರೀಮತಿ ಬಂಗೇರ ಅವರ ಬೇಡಿಕೆಯೂ ಇದ್ದ ಕಾರಣ ಪಕ್ಷ ಇವರು ಹಾಗೂ ಜುಲೇಕಾಬಿ ಅವರಿಗೆ ತಲಾ ೧೫ ತಿಂಗಳ ಅಧಿಕಾರ ನೀಡುವ ಒಡಂಬಡಿಕೆ ಮೂಲಕ ಇದನ್ನು ಸರಿಪಡಿಸಿತ್ತು. ೧೫ ತಿಂಗಳ ಬಳಿಕ ಬದಲಾವಣೆಯಾಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂಎಗೆ ನಿಗದಿಯಾಗಿತ್ತು. ಈ ಸಂದರ್ಭ ಅಧಿಕಾರ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ರಾಜಕೀಯ ಮೇಲಾಟ ನಡೆದು ಯಾರೂ ಊಹಿಸಿರದಿದ್ದ ಘಟನಾವಳಿಗಳು ನಡೆದವು.

ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ಬಂದಾಗ ಕಾಂಗ್ರೆಸ್‌ನ ಇಬ್ಬರು ಸದಸ್ಯೆರಾದ ಹಿಂದೆ ಅಧ್ಯಕ್ಷರಾಗಿದ್ದ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಅವರುಗಳು ಮಾತೃ ಪಕ್ಷಕ್ಕೆ ‘ಕೈ’ಕೊಟ್ಟರು. ಬಿಜೆಪಿ ಪಾಳಯದೊಂದಿಗೆ ಗುರುತಿಸಿಕೊಂಡ ಇವರಿಬ್ಬರು ಮತ ಚಲಾವಣೆಗೂ ಬಿಜೆಪಿ ದಂಡಿನೊAದಿಗೇ ಆಗಮಿಸಿದ್ದರು.

ಗೈರಾದ ಸಂಸದರು

ನಿಯಮಾವಳಿಯAತೆ ಚುನಾವಣೆ ನಡೆದ ಸಂದರ್ಭ ಎಲ್ಲವೂ ಅಂದುಕೊAಡAತೆ ನಡೆದಿದ್ದರೆ, ಬಿಜೆಪಿ ಬಹುಶಃ ೧೪-೧೩ ಮತದಿಂದ ನಿಸ್ಸಂಶಯವಾಗಿ ಅಧಿಕಾರ ಹಿಡಿಯಬಹುದಾಗಿತ್ತು. ಆದರೆ ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಅವರು ಮತ ಚಲಾಯಿಸಲು ಆಗಮಿಸದೆ ಗೈರು ಹಾಜರಾದ ಕಾರಣ ಎರಡೂ ಪಕ್ಷದ ಅಭ್ಯರ್ಥಿಗಳಿಗೆ ತಲಾ ೧೩ ಮತ ಲಭ್ಯವಾಗಿ ‘ಟೈ’ ಆಗಿತ್ತು.

ಟಾಸ್‌ನ ಮೂಲಕ ಅದೃಷ್ಟ

ಸಮಬಲ ಎದುರಾದ ಕಾರಣ ವಿಜೇತರ ಆಯ್ಕೆಗೆ ಟಾಸ್‌ನ ಮೊರೆಹೋಗಲಾಗಿತ್ತು. ಇದರಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಕಾವೇರಮ್ಮ ಸೋಮಣ್ಣ ಅದೃಷ್ಟಶಾಲಿಯಾದರೆ, ಉಪಾಧ್ಯಕ್ಷರಾಗಿ ಬಿಜೆಪಿಯ ಟಿ.ಎಸ್. ಪ್ರಕಾಶ್ ಗೆಲುವಿನ ನಗೆ ಬೀರಿದ್ದು, ಈ ಹಿಂದಿನ ಆಡಳಿತ ಮೆಲುಕಾಗಿದೆ.

ಪ್ರಸ್ತುತದ ಅಖಾಡ : ಇಂದು ಫಲಿತಾಂಶ

ನಗರಸಭೆಗೆ ಏ. ೨೭ ರಂದು ಚುನಾವಣೆ ನಡೆದಿದೆ. ೨೩ ವಾರ್ಡ್ಗಳಿಗೆ ಒಟ್ಟು ೧೦೮ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿAದ ೨೩, ಬಿಜೆಪಿಯಿಂದ ೨೩, ಜೆಡಿಎಸ್‌ನಿಂದ ೨೨, ಎಸ್‌ಡಿಪಿಐನಿಂದ ೯, ಆಮ್ ಆದ್ಮಿಯಿಂದ ೪ ಹಾಗೂ ಪಕ್ಷೇತರರಾಗಿ ೨೭ ಅಭ್ಯರ್ಥಿಗಳು ಚುನಾವಣೆ ಎದುರಿಸಿದ್ದಾರೆ. ಬಹುಮತ ಯಾರಿಗೆ ಎಂಬದು ಈಗಿನ ಕುತೂಹಲವಾಗಿದೆ. ನಗರದ ಸಂತ ಜೋಸೆಫರ ಶಾಲೆಯಲ್ಲಿ ಬೆ. ೮ ರಿಂದ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಬರಬಹುದು. ಆಡಳಿತ ಹಿಡಿಯಲು ಅಗತ್ಯವಿದ್ದ ಪಕ್ಷದಲ್ಲಿ ಈ ಬಾರಿಯೂ ಬಿಜೆಪಿಗೆ ಓರ್ವ ಎಂಪಿ, ಇಬ್ಬರು ಶಾಸಕರು ಇದ್ದರೆ, ಕಾಂಗ್ರೆಸ್‌ಗೆ ಓರ್ವ ಎಂಎಲ್‌ಸಿ ಇದ್ದಾರೆ.