ನಾಪೋಕ್ಲು, ಏ. ೨೯: ಸಮೀಪದ ಪಾರಾಣೆ-ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಾಡು, ಪಾರಾಣೆ, ಬಲಮುರಿ ಗ್ರಾಮಗಳಲ್ಲಿ ಹಾಗೂ ಬೇತು ಗ್ರಾಮದ ಕೆಲವೆಡೆ ತಾ. ೨೮ ರ ಮಧ್ಯಾಹ್ನ ಆಲಿಕಲ್ಲು ಮಳೆ ಸುರಿಯಿತು. ನಾಪೋಕ್ಲು ಪಟ್ಟಣ ಮತ್ತು ಸುತ್ತಮುತ್ತ ಸಾಧಾರಣ ಮಳೆಯಾದ ಬಗ್ಗೆ ವರದಿಯಾಗಿದೆ.