(ಹೆಚ್.ಜೆ. ರಾಕೇಶ್)
ಮಡಿಕೇರಿ, ಏ. ೨೯: ಕೊರೊನಾ ನಿಯಂತ್ರಣದಲ್ಲಿ ದೇಶಕ್ಕೆ ಮಾದರಿಯಾಗಿ ಕನಿಷ್ಟ ಮಟ್ಟದಲ್ಲಿದ್ದ ಕೊರೊನಾ ಸೋಂಕಿನ ಪ್ರಮಾಣ ಕಳೆದ ಕೆಲವು ದಿನಗಳಲ್ಲಿ ಕ್ಷಿಪ್ರಗತಿಯಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ್ದು, ಪ್ರಸ್ತುತ ಶೇ ೨೨.೪ ರಷ್ಟು ಪಾಸಿಟಿವಿಟ್ ದರ ಕಂಡು ಬಂದಿದೆ. ಇದರಿಂದ ಜಿಲ್ಲೆಯಲ್ಲಿ ಆತಂಕ ಮೂಡಿದ್ದು, ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳನ್ನು ಲಾಕ್‌ಡೌನ್ ಮಾಡುವ ಸಲಹೆಯನ್ನು ಕೇಂದ್ರ ಸರಕಾರಕ್ಕೆ ತಜ್ಞರ ಸಮಿತಿ ಸಲ್ಲಿಸಿದೆ.
ರಾಜ್ಯದಲ್ಲೇ ಪಾಸಿಟಿವಿಟಿ ದರದಲ್ಲಿ ಕೊಡಗು ಜಿಲ್ಲೆ ಅಗ್ರಸ್ಥಾನದಲ್ಲಿದ್ದು, ತಾ. ೨೮ ರಂದು ಇದ್ದ ೨೦.೭ ಪಾಸಿಟಿವಿಟಿ ದರ ತಾ. ೨೯ ರಂದು ಶೇ ೨೨.೪ಕ್ಕೆ ಏರಿಕೆ ಕಂಡಿದೆ.
೧೮.೦೩.೨೦೨೦ಕ್ಕೆ ಕೊಡಗು ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿತ್ತು. ಅಂದು ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ಅಂರ‍್ರಾಜ್ಯ ಸಂಚಾರವನ್ನು ಕೊಡಗು ಜಿಲ್ಲಾಡಳಿತ ಸ್ಥಗಿತಗೊಳಿಸಿ, ಸೋಂಕು ತಡೆಗೆ ಅಗತ್ಯ ಕ್ರಮವಹಿಸಿತ್ತು. ಬಳಿಕ ಇಡೀ ರಾಜ್ಯ ಲಾಕ್‌ಡೌನ್‌ಗೊಂಡಿತು. ಎಲ್ಲವೂ ಸರಿಯಾಯಿತು. ಕೊಡಗಿನಲ್ಲಿ ಕೊರೊನಾ ಪ್ರಮಾಣ ಇಳಿಕೆಯಾಯಿತು ಎನ್ನುವಷ್ಟರಲ್ಲಿ ಕೊರೊನಾ ೨ನೇ ಅಲೆ ಕೊಡಗಿಗೆ ದೊಡ್ಡ ಮಟ್ಟದಲ್ಲಿ ಅಪ್ಪಳಿಸಿದ್ದು, ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಏರಿಕೆಯಾಗುತ್ತಲೆ ಹೋಗುತ್ತಿದೆ. ಇದರೊಂದಿಗೆ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ೧೦೨ಕ್ಕೆ ಏರಿಕೆ ಕಂಡಿದೆ.
ಪಾಸಿಟಿವಿಟಿ ಹೆಚ್ಚು: ಕಳೆದ ಕೆಲವು ತಿಂಗಳಿನಲ್ಲಿ ೫೦
(ಮೊದಲ ಪುಟದಿಂದ) ದಾಟದ ಕೊರೊನಾ ಸೋಂಕಿತರ ಸಂಖ್ಯೆ ಕಳೆದ ಒಂದು ವಾರದಿಂದ ಮೂರಂಕಿ ದಾಟಿ ೫೦೦ರ ಗಡಿ ತಲುಪಿದೆ.
ಏಪ್ರಿಲ್ ೧ ರಂದು ಕೇವಲ ೭ ಸೋಂಕಿತರು ಜಿಲ್ಲೆಯಲ್ಲಿದ್ದರು. ನಂತರ ತಾ. ೨ ರಂದು ೨೧, ತಾ. ೩ ರಂದು ೧೧, ತಾ. ೪ ರಂದು ೧೩, ತಾ. ೫ ರಂದು ೧೫, ತಾ. ೬ ರಂದು ೨೨, ತಾ. ೭ ರಂದು ೧೦, ತಾ. ೮ ರಂದು ೧೯, ತಾ. ೯ ರಂದು ೧೯, ತಾ. ೧೦ ರಂದು ೨೧, ತಾ. ೧೧ ರಂದು ೩೯, ತಾ. ೧೨ ರಂದು ೨೬, ತಾ. ೧೩ ರಂದು ೧೪, ತಾ. ೧೪ ರಂದು ೧೧, ತಾ. ೧೫ ರಂದು ೭೨,
ತಾ. ೧೬ ರಂದು ೩೦, ತಾ. ೧೭ ರಂದು ೫೫, ತಾ. ೧೮ ರಂದು ೬೭, ತಾ. ೧೯ ರಂದು ೯೯, ತಾ. ೨೦ ರಂದು ೫೧ ಇದ್ದ ಕೊರೊನಾ ಸೋಂಕಿತರ ಸಂಖ್ಯೆ ನಂತರ ಮೂರಂಕಿ ದಾಟಿ ನಿತ್ಯ ಮೂರಂಕಿಯ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದವು.
ತಾ. ೨೧ ರಂದು ೧೫೯, ತಾ ೨೨ ರಂದು ೧೮೩, ತಾ. ೨೩ ರಂದು ೨೮೭ ಇದ್ದ ಕೊರೊನಾ ಸೋಂಕಿತರ ಸಂಖ್ಯೆ ತಾ. ೨೪ ರಂದು ದಿಢೀರನೆ ೫೪೮ಕ್ಕೆ ಏರಿಕೆ ಕಂಡಿತು. ತಾ. ೨೫ ರಂದು ೨೯೬, ತಾ. ೨೬ ರಂದು ೪೯೫, ತಾ. ೨೭ ರಂದು ೨೯೭, ತಾ. ೨೮ ರಂದು ೫೧೬, ತಾ. ೨೯ ರಂದು ೪೩೬ ಕೊರೊನಾ ಪ್ರಕರಣಗಳು ದೃಢಪಟ್ಟಿದೆ.
ಏನಿದು ಪಾಸಿಟಿವಿಟಿ..?: ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ಎಷ್ಟು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಡುತ್ತದೆ ಎಂಬ ಲೆಕ್ಕಾಚಾರ ಆಧಾರದಲ್ಲಿ ಪಾಸಿಟಿವಿಟಿ ರೇಟನ್ನು ಘೋಷಣೆ ಮಾಡಲಾಗುತ್ತದೆ.
ನಿತ್ಯ ಒಂದು ಸಾವಿರ ಸ್ವಾö್ಯಬ್ ಪರೀಕ್ಷೆಯ ಗುರಿ ಇದೆ. ಆದರೆ, ಜಿಲ್ಲೆಯಲ್ಲಿ ನಿತ್ಯ ಅಂದಾಜು ಒಂದೂವರೆ ಸಾವಿರದಿಂದ ೨ ಸಾವಿರದ ತನಕ ಪರೀಕ್ಷೆ ನಡೆಯುತ್ತಿವೆ. ನಿತ್ಯ ಪಾಸಿಟಿವಿಟಿ ಸಂಖ್ಯೆಯಲ್ಲಿ ವ್ಯತ್ಯಾಸವಿರುತ್ತದೆ.
ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಸೋಂಕು
ಸೋAಕಿತರ ಪ್ರಾಥಮಿಕ ಸಂಪರ್ಕದಲಿದ್ದ ಬಹುತೇಕರಿಗೆ ಸೋಂಕು ತಗುಲಿರುವುದರಿಂದ ಕೊಡಗು ಜಿಲ್ಲೆಯಲ್ಲಿ ಕೊರೊನಾ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವಾಗಿದೆ. ಒಂದು ಸಾವಿರ ಪರೀಕ್ಷೆ ಮಾಡಲು ಗುರಿ ಇದ್ದರೂ ಕೂಡ ಜಿಲ್ಲೆಯಲ್ಲಿ ನಿತ್ಯ ೨ ಸಾವಿರಕ್ಕಿಂತ ಹೆಚ್ಚು ಪರೀಕ್ಷೆಗಳು ನಡೆಯುತ್ತಿವೆ.
ಇದರೊಂದಿಗೆ ಬೇರೆ ಜಿಲ್ಲೆಯಿಂದ ಬಂದವರಿಗೆ ಕೊರೊನಾ ಸೋಂಕು ಕಂಡುಬರುತ್ತಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೂಡ ಹೊರಜಿಲ್ಲೆಯಿಂದ ಬಂದವರು ೧೦ ದಿನಗಳ ಕಾಲ ಸ್ವಯಂ ಸಂಪರ್ಕ ತಡೆಯಲ್ಲಿರಲು ಸಲಹೆ ನೀಡಿದೆ. ಕೊರೊನಾ ಲಕ್ಷಣ ಕಂಡುಬAದಲ್ಲಿ ಪರೀಕ್ಷೆಗೆ ಒಳಪಡಲು ತಿಳಿಸಿದೆ.
ಲಾಕ್‌ಡೌನ್‌ಗೆ ಸಲಹೆ: ಕೊರೊನಾ ಪಾಸಿಟಿವಿಟಿ ಶೇ. ೧೫ಕ್ಕಿಂತ ಹೆಚ್ಚಿರುವ ಜಿಲ್ಲೆಯನ್ನು ಲಾಕ್‌ಡೌನ್ ಮಾಡುವ ಪ್ರಸ್ತಾವನೆಯನ್ನು ತಜ್ಞರ ಸಮಿತಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ.
ತಾ. ೨೭ ರಂದು ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಆದರೆ, ಅಂತಿಮ ನಿರ್ಧಾರ ಇನ್ನೂ ಕೈಗೊಂಡಿಲ್ಲ. ಕೇಂದ್ರ ಸರಕಾರ ರಾಜ್ಯ ಸರಕಾರದೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ದೇಶದ ೧೫೦ ಜಿಲ್ಲೆ, ಕರ್ನಾಟಕ ರಾಜ್ಯದ ೧೦ ಜಿಲ್ಲೆಯಲ್ಲಿ ಶೇ. ೧೫ ಕ್ಕಿಂತ ಹೆಚ್ಚಿನ ಪಾಸಿಟಿವಿಟ್ ದರವಿದ್ದು, ಅದರಲ್ಲಿ ಕೊಡಗು ಕೂಡ ಒಂದಾಗಿದೆ.
೧೦೨ ಮರಣ ಪ್ರಕರಣ – ೩೨೬೬ ಸಕ್ರಿಯ
ಜಿಲ್ಲೆಯಲ್ಲಿನ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೧೦,೨೪೦ ಆಗಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ೬೧ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ೬೯೭೪ ಮಂದಿ ಗುಣಮುಖರಾಗಿದ್ದಾರೆ. ೩೨೬೬ ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ ೧೦೨ ಮರಣ ಪ್ರಕರಣಗಳು ಜಿಲ್ಲೆಯಲ್ಲಿ ಸಂಭವಿಸಿದೆ.
ತಾ. ೨೮ ರಂದು ೬ ಮರಣ ಪ್ರಕರಣ ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್‌ಮೆAಟ್ ವಲಯಗಳ ಸಂಖ್ಯೆ ೪೩೩ ಆಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ೮ ಗಂಟೆ ವೇಳೆಗೆ ೪೩೬ ಹೊಸ ಕೋವಿಡ್-೧೯ ಪ್ರಕರಣಗಳ ಪೈಕಿ ಮಡಿಕೇರಿ ತಾಲೂಕಿನಲ್ಲಿ ೧೭೦, ಸೋಮವಾರಪೇಟೆ ತಾಲೂಕಿನಲ್ಲಿ ೧೯೫, ವೀರಾಜಪೇಟೆ ತಾಲೂಕಿನಲ್ಲಿ ೭೧ ಹೊಸ ಕೋವಿಡ್-೧೯ ಪ್ರಕರಣಗಳು ಕಂಡುಬAದಿದೆ.