ಮಡಿಕೇರಿ, ಏ. ೨೯: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ತರ್ಜುಮೆ ಸಾಹಿತ್ಯಕ್ಕೆ ಉತ್ತೇಜನ ನೀಡಲು ಈಗಾಗಲೇ ಕವನ ಸ್ಪರ್ಧೆ ಏರ್ಪಡಿಸಿದ್ದು, ಇದಕ್ಕೆ ಸಾಕಷ್ಟು ಸ್ಪಂದನ ಸಿಕ್ಕಿದ ಹಿನ್ನೆಲೆ ತರ್ಜುಮೆ ಕಥಾ ಸ್ಪರ್ಧೆ ಆಯೋಜಿಸಲಾಗಿದೆ.
ಕಥೆಯು ೩ ಸಾವಿರ ಶಬ್ದಗಳಿಗೆ ಮೀರದಂತಿರಬೇಕು ಹಾಗೂ ಕೊಡವ ಭಾಷೆಯಲ್ಲಿ ಇರಬೇಕು. ಹಾಳೆಯ ಒಂದೇ ಬದಿಯಲ್ಲಿ ಬರೆಯಬೇಕು ಅಥವಾ ಟೈಪ್ ಮಾಡಿರಬೇಕು. ತರ್ಜುಮೆ ಕಥೆಯ ಜೊತೆಯಲ್ಲಿ ಮೂಲ ಕಥೆಯ ಪ್ರತಿಯನ್ನೂ, ಮೂಲಕಥೆ ಬರೆದವರ ಹೆಸರನ್ನು ನಮೂದಿಸಬೇಕು. ಈ ಸ್ಪರ್ಧೆಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಕಥೆ ತರ್ಜುಮೆ ಮಾಡಿದವರು ತಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಬೇರೆ ಹಾಳೆಯಲ್ಲಿ ನಮೂದಿಸಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಸ್ಕೌಟ್ಸ್ ಮತ್ತು ಗೈಡ್ಸ್ ಕಟ್ಟಡ, ಮಡಿಕೇರಿ ವಿಳಾಸಕ್ಕೆ ಮೇ ೨೦ ರೊಳಗೆ ಅಂಚೆ ಅಥವಾ ಖುದ್ದಾಗಿ ತಲುಪಿಸುವಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.