ಮಡಿಕೇರಿ, ಏ. ೨೯: ರಾಷ್ಟçವ್ಯಾಪಿ ಕೊರೊನಾ ೨ನೇ ಅಲೆ ಸ್ಫೋಟಗೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಕೊಡಗು ಜಿಲ್ಲೆಯಲ್ಲಿ ಕೂಡ ವ್ಯತಿರಿಕ್ತ ಪರಿಸ್ಥಿತಿ ಸೃಷ್ಟಿಯಾಗಿದೆ. ಕೋವಿಡ್ ಕರ್ಫ್ಯೂ ಹಿನ್ನೆಲೆ ಜನತೆ ಸಂಕಷ್ಟದಲ್ಲಿ ದಿನದೂಡುತ್ತಿದ್ದು, ಹಲವು ಅನುಮಾನ, ಗೊಂದಲಗಳು ಕೂಡ ತಲೆದೋರುತ್ತಿದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ೫ ತಾಲೂಕಿಗಾಗಿ ಮೂರು ಕಡೆಗಳಲ್ಲಿ ಸಹಾಯವಾಣಿ ಹಾಗೂ ಜಿಲ್ಲಾ ಕೇಂದ್ರದಲ್ಲಿ ಕೋವಿಡ್ ಕಂಟ್ರೋಲ್ ರೂಂ ಕಾರ್ಯೋನ್ಮುಖಗೊಂಡಿದೆ.

ವೀರಾಜಪೇಟೆ, ಸೋಮವಾರ ಪೇಟೆಯಲ್ಲಿ ಒಂದು ಸಹಾಯವಾಣಿ ಸೇವೆ ನೀಡುತ್ತಿದೆ. ಇದಕ್ಕೆ ನೂತನ ಪೊನ್ನಂಪೇಟೆ ಹಾಗೂ ಕುಶಾಲನಗರ ವ್ಯಾಪ್ತಿಯ ಜನತೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದಾಗಿದೆ. ಇದರೊಂದಿಗೆ ಮಡಿಕೇರಿಯಲ್ಲಿ ಸಹಾಯವಾಣಿ, ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್ ಕಂಟ್ರೋಲ್ ರೂಂ ತೆರೆಯಲಾಗಿದೆ.

ಸೋಂಕಿತರ ಸಂಪರ್ಕಕ್ಕೆ ಹೆಚ್ಚಿನ ಕರೆ

ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ರುವ ಸೋಂಕಿತರನ್ನು ಸಂಪರ್ಕಿಸಲು, ಅವರ ಆರೋಗ್ಯ ಸ್ಥಿರತೆಯ ಮಾಹಿತಿ ಪಡೆಯುವ ಸಲುವಾಗಿ ಹೆಚ್ಚಿನ ಕರೆಗಳು ಸಹಾಯವಾಣಿಯಲ್ಲಿ ಸ್ವೀಕೃತ ಗೊಳ್ಳುತ್ತಿವೆ.

ಸೋಂಕಿತರ ಕುಟುಂಬಸ್ಥರು ಕರೆ ಮಾಡಿದಾಗ ಸಹಾಯವಾಣಿ ಸಿಬ್ಬಂದಿಗಳು ಕರೆ ಸ್ವೀಕರಿಸಿ ಸಮಸ್ಯೆ ಆಲಿಸಿ ಮಾಹಿತಿ ಪಡೆದುಕೊಂಡು ಸಂಬAಧಪಟ್ಟವರಿಗೆ ವಿಷಯ ಮುಟ್ಟಿಸುತ್ತಾರೆ. ಸಹಾಯವಾಣಿ ಸಿಬ್ಬಂದಿಗಳು ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣಾಧಿಕಾರಿ ಕಚೇರಿ, ಜಿಲ್ಲಾಧಿಕಾರಿ ಕಂಟ್ರೋಲ್ ರೂಂ, ಕೋವಿಡ್ ಸೆಂಟರ್, ಜಿಲ್ಲಾಸ್ಪತ್ರೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹು ದಾಗಿದೆ.

ಮಡಿಕೇರಿ ಸಹಾಯವಾಣಿಗಾಗಿ ಶಿಕ್ಷಕರನ್ನು, ವೀರಾಜಪೇಟೆ ತಾಲೂಕಿನಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ದಿನದ ೨೪ ಗಂಟೆಯೂ ಸಹಾಯ ವಾಣಿ ಸೇವೆ ನೀಡುತ್ತಿದೆ. ಬೆಳಿಗ್ಗೆ ೬ ರಿಂದ ೨, ಮಧ್ಯಾಹ್ನ ೨ ರಿಂದ ರಾತ್ರಿ ೮, ರಾತ್ರಿ ೮ ರಿಂದ ಬೆಳಿಗ್ಗೆ ೬ರ ತನಕ ಮೂರು ಹಂತದಲ್ಲಿ ಕೆಲಸವನ್ನು ಸಿಬ್ಬಂದಿಗಳು ನಿರ್ವಹಿಸುತ್ತಿದ್ದಾರೆ.

ಉತ್ತಮ ಪ್ರತಿಕ್ರಿಯೆ: ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರನ್ನು ಸಂಪರ್ಕಿಸಲು ಹೆಚ್ಚಿನ ಕರೆಗಳು ಬರುತ್ತಿದ್ದು, ಸಿಬ್ಬಂದಿಗಳು ಸಂಬAಧಿಸಿ ದವರನ್ನು ಸಂಪರ್ಕಿಸಿ ಕುಟುಂಬಸ್ಥರಿಗೆ ಕರೆ ಮಾಡಿ ಪರಿಸ್ಥಿತಿಯ ಬಗ್ಗೆ ತಿಳಿಸಿ, ಆದಲ್ಲಿ ಸೋಂಕಿತರೊAದಿಗೆ ಮಾತನಾಡಿಸುವ ಪ್ರಯತ್ನ ಕೂಡ ಮಾಡುತ್ತಾರೆ. ಏನಾದರು ಮಾತನಾಡಿಸಲು ಆಗದಿದ್ದಲ್ಲಿ ಅವರ ಆರೋಗ್ಯದ ಸ್ಥಿರತೆ ಬಗ್ಗೆ ಸಂಪೂರ್ಣ ವಿವರವನ್ನು ನೀಡಲಾಗು ತ್ತದೆ. ಇದರೊಂದಿಗೆ ಕೋವಿಡ್ ಲಸಿಕೆ, ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವ ಬಗ್ಗೆ ಕೂಡ ಕರೆಗಳು ಬರುತ್ತಿವೆ.

ಈಗಾಗಲೇ ಮಡಿಕೇರಿ ತಾಲೂಕಿನ ಸಹಾಯವಾಣಿಗೆ ೩೫ಕ್ಕೂ ಹೆಚ್ಚಿನ ಕರೆಗಳು, ಮಡಿಕೇರಿ ತಾಲೂಕಿನಲ್ಲಿ ೫೦ಕ್ಕೂ ಹೆಚ್ಚು ಕರೆ ಸ್ವೀಕಾರವಾಗಿದೆ. ಬಹುತೇಕ ವಿಚಾರಗಳಿಗೆ ಸೂಕ್ತ ಸ್ಪಂದನ ನೀಡಲಾಗಿದೆ.

-ಹೆಚ್.ಜೆ. ರಾಕೇಶ್