ಕೂಡಿಗೆ, ಏ. ೨೯: ಹಾರಂಗಿ ಅಣೆಕಟ್ಟೆಗೆ ಸಂಬAಧಿಸಿದ ಪ್ರಮುಖ ಕಚೇರಿಗಳು ಕುಶಾಲನಗರದಲ್ಲಿದ್ದು ಹಾರಂಗಿಯ ಅಚ್ಚುಕಟ್ಟು ಪ್ರದೇಶದ ನೂರಾರು ರೈತರು ಹಾರಂಗಿಯ ಉಪ ವಿಭಾಗದ ಕಚೇರಿಯಲ್ಲಿ ನೀರಿನ ಮತ್ತು ಉಪ ನಾಲೆಯ ದುರಸ್ತಿಗೆ ಸಂಬAಧಿಸಿದAತೆ ದೂರು ನೀಡಲು ಸಾಧ್ಯವಾಗುತ್ತಿಲ್ಲ. ಮುಖ್ಯ ಕಚೇರಿಗಳು ಕುಶಾಲನಗರದಲ್ಲಿರುವುದರಿಂದ ಈ ಕಚೇರಿಗಳನ್ನು ಹಾರಂಗಿಗೆ ಸ್ಥಳಾಂತರ ಮಾಡುವಂತೆ ಅಚ್ಚುಕಟ್ಟು ವ್ಯಾಪ್ತಿಯ ಗ್ರಾಮಸ್ಥರ ಆಗ್ರಹವಾಗಿದೆ.
ಹಾರಂಗಿಗೆ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಾದ ಶಿರಂಗಾಲ, ಹೆಬ್ಬಾಲೆ, ತೊರೆನೂರು, ಮರೂರು, ಕಣಿವೆ, ಹುಲುಸೆ, ಕೂಡಿಗೆ, ಮದಲಾಪುರ, ಹುದುಗೂರು, ಕಾಳಿದೇವನ ಹೊಸೂರು ಸೇರಿದಂತೆ ೧೧೬ ಉಪ ಗ್ರಾಮಗಳ ರೈತರು ತಮ್ಮ ಜಮೀನಿನ ನೀರಿನ ಸಮಸ್ಯೆ ಅಥವಾ ಕಾಲುವೆಗಳ ದುರಸ್ತಿಗೆ ಉಪ ನಾಲೆಗಳ ಅಭಿವೃದ್ಧಿಯ ಬಗ್ಗೆ ಮನವಿಯನ್ನು ನೀಡಲು ಹಾರಂಗಿಗೆ ಬಂದರೆ, ಮುಖ್ಯ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡಲು ಕುಶಾಲನಗರಕ್ಕೆ ಹೋಗಬೇಕಾದ ಪ್ರಸಂಗ ಎದುರಾಗುತ್ತಿದೆ. ಹಾರಂಗಿಯಿAದ ೫ ಕಿಲೋಮೀಟರ್ ದೂರದ ಕುಶಾಲನಗರಕ್ಕೆ ಹೋಗಬೇಕಾಗುತ್ತದೆ.
ಹಾರಂಗಿ ಅಣೆಕಟ್ಟೆಯ ಕಾಮಗಾರಿಯು ಪ್ರಾರಂಭವಾದಗಿನಿAದಲೂ ಹಾರಂಗಿಯ ಕೇಂದ್ರ ಸ್ಥಾನದಲ್ಲಿ ಕಾವೇರಿ ನೀರಾವರಿ ನಿಗಮದ ಅಭಿಯಂತರ ಕಚೇರಿ ಮತ್ತು ಸಹಾಯಕ ಅಭಿಯಂತರರ ಕಚೇರಿಗಳು ಇದ್ದವು. ಈ ಕಚೇರಿಗಳು ನಡೆಯಲು ಸುಸಜ್ಜಿತವಾದ ಕಟ್ಟಡಗಳು ಇದ್ದರೂ ಸಹ ಕುಶಾಲನಗರದ ಹಾರಂಗಿ ನೀರಾವರಿ ಇಲಾಖೆಯ ವಸತಿ ಗೃಹಗಳು ಇರುವ ಜಾಗದಲ್ಲಿ ಆರಂಭ ಮಾಡಲಾಗಿದೆ. ಇದರಿಂದಾಗಿ ಈ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮಸ್ಯೆಯಾಗಿದೆ ಎಂಬದು ಪ್ರಮುಖ ಆಗ್ರಹವಾಗಿದೆ. ಇದಕ್ಕೆ ಸಂಬAಧಿಸಿದAತೆ ಕ್ಷೇತ್ರದ ಶಾಸಕರು ಹೆಚ್ಚು ಗಮನ ಹರಿಸಿ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಕಚೇರಿಗಳನ್ನು ಹಾರಂಗಿಯಲ್ಲಿ ಆರಂಭ ಮಾಡುವಂತೆ ರೈತರು ಒತ್ತಾಯ ಮಾಡಿದ್ದಾರೆ.
-ಕೆ.ಕೆ. ನಾಗರಾಜಶೆಟ್ಟಿ