ಮಡಿಕೇರಿ, ಏ. ೨೯: ಮಡಿಕೇರಿಯ ಮಂಗಳಾದೇವಿ ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ತಾ. ೨೭ ರಂದು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕುಸಿದು ಬಿದ್ದು ಮೃತಪಟ್ಟಿದ್ದು, ವ್ಯಕ್ತಿಯ ಹೆಸರು ಸಿದ್ದರಾಜು ಎಂಬುದಾಗಿ ತಿಳಿದು ಬಂದಿದೆ. ಈತನ ವಿಳಾಸ ಹಾಗೂ ವಾರಸುದಾರರು ಯಾರೆಂದು ಈವರೆಗೂ ತಿಳಿದುಬಂದಿರುವುದಿಲ್ಲ. ಈ ಸಂಬAಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ಸಂಖ್ಯೆ: ೦೮/೨೦೨೧ ಕಲಂ ೧೭೪ ಸಿಆರ್‌ಪಿಸಿ ರೀತ್ಯ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ವಾರಸುದಾರರಿದ್ದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಕೋರಿಕೆ. ದೂ. ೦೮೨೭೨- ೨೨೯೩೩೩