ಕಡಂಗ, ಏ. ೨೯: ಸುನ್ನೀ ಯುವಜನತೆಯ ಒಕ್ಕೂಟ (ಎಸ್‌ವೈಎಸ್) ಇದರ ಕಡಂಗ ಶಾಖೆ ವತಿಯಿಂದ ಸ್ಥಳೀಯ ಬಡ ಕುಟುಂಬಕ್ಕೆ ಆಹಾರ ದಾನ್ಯಗಳ ರಂಜಾನ್ ಕಿಟ್ಟನ್ನು ವಿತರಿಸಲಾಯಿತು.
ಈ ಸಂದರ್ಭ ಕಡಂಗ ಶಾಖೆ ಅಧ್ಯಕ್ಷ ಸುಲೈಮಾನ್, ಕಾರ್ಯದರ್ಶಿ ಯು.ಎಂ. ಸಲಾಂ, ಇಸಾಬಾ, ಕಾರ್ಯಕರ್ತ ರಂಶೀದ್ ಪೊದ್ದಮಾನಿ, ಕೋಶಾಧಿಕಾರಿ ಸಿ.ಎ. ರಜಾಕ್, ಸದಸ್ಯರಾದ ಎ.ಹೆಚ್. ಮಮ್ಮದ್, ಷಂಶುದ್ದೀನ್, ರಶೀದ್ ಐಬಿಎಂ, ಹಾಗೂ ಸಿ.ಎ. ಅಶ್ರಫ್ ಇದ್ದರು.